ಸೆಕ್ಸ್ ಹಗರಣದಲ್ಲಿ ಮಲೇಷಿಯಾದ ಸರವಣ

Indian-origin Malaysian minister denies sex scam charges
ಕೌಲಾಲಂಪುರ, ಅ.17: ಭಾರತೀಯ ಮೂಲದ ಸಚಿವರೊಬ್ಬರು ಸೆಕ್ಸ್ ಹಗರಣ ಹಾಗೂ ಮಾದಕದ್ರವ್ಯ ಅಕ್ರಮ ಸಾಗಾಣಿಕೆ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವನ್ನು ಮಲೇಷಿಯಾ ಸರ್ಕಾರ ತಳ್ಳಿಹಾಕಿದೆ.

ಮಲೇಷಿಯಾ ಸರ್ಕಾರದಲ್ಲಿ ನಾಗರೀಕ ಸೌಲಭ್ಯ ಹಾಗೂ ಉಗ್ರರ ನಿಗ್ರಹ ಖಾತೆ ರಾಜ್ಯ ಸಚಿವರಾಗಿರುವ ಎಂ ಸರವಣನ್ ಅವರ ಮೇಲೆ ಕಾಲೇಜು ಕನ್ಯೆಯರನ್ನು ಸೆಕ್ಸ್ ದಂಧೆಗೆ ತಳ್ಳುತ್ತಿರುವ ಹಾಗೂ ಡ್ರಗ್ಸ್ ಮಾಫಿಯಾ ನಡೆಸುತ್ತಿರುವ ಆರೋಪವನ್ನು ಹೊರೆಸಲಾಗಿದೆ.

ಆರೋಪ ಹೊತ್ತಿರುವ ಸಚಿವ ಸರವಣನ್, ಇದೆಲ್ಲಾ ನನ್ನ ರಾಜಕೀಯ ಜೀವನವನ್ನು ನಾಶ ಮಾಡಲು ಪ್ರತಿಪಕ್ಷದವರು ಹೂಡಿರುವ ತಂತ್ರ. ನಾನು ಯಾವುದೇ ದುಷ್ಟ ಕೆಲಸದಲ್ಲಿ ತೊಡಗಿಲ್ಲ. ಪೊಲೀಸರ ತನಿಖೆಗೆ ನಾನು ಸಿದ್ಧ ಎಂದಿದ್ದಾರೆ.

ಆದರೆ, ಇಲ್ಲಿನ ಪ್ರತಿಪಕ್ಷವಾದ ಪಿಕೆಆರ್ ನ ಮುಖ್ಯಸ್ಥ ಎಂಎಸ್ ಅರ್ಜುನನ್ ಅವರಿಗೆ ಸರವಣನ್ ಅವರ ಅಕ್ರಮ ದಂಧೆಯ ಕುರಿತು ಪತ್ರ ಬಂದಿದ್ದು, ಅದರ ಆಧಾರದ ಮೇಲೆ ಪೊಲೀಸರಿಗೆ ದೂರಿತ್ತಿದ್ದಾರೆ. ಆದರೆ, ಪತ್ರ ಬರೆದ ವ್ಯಕ್ತಿ ಇನ್ನೂ ಕಾಣಿಸಿಕೊಂಡಿಲ್ಲ.

ಗೊಂಬಾಕ್ ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗಾಗಿ ಸರವಣನ್ ಒಂದು ಪ್ರತ್ಯೇಕ ಬಾಡಿಗೆಗೆ ಮನೆ ಮಾಡಿದ್ದ. ಅಲ್ಲಿಂದ ಅವರನ್ನು ಪ್ರಸಿದ್ಧ ಹೋಟೆಲ್ ಗಳಲ್ಲಿ ತಂಗಿರುವ ಮಲೇಷಿಯನ್ ಮೂಲದ ವ್ಯಕ್ತಿಗಳ ಬಳಿಗೆ ಅಟ್ಟಿ, ಮೈಮಾರಲು ಬಿಡುತ್ತಿದ್ದ ಎಂದು ಪತ್ರದಲ್ಲಿ ವಿಸ್ತಾರವಾಗಿ ಬರೆಯಲಾಗಿದೆ.

ಮಲೇಷಿಯನ್ ಇಂಡಿಯನ್ ಕಾಂಗ್ರೆಸ್ ಗೆ ಸೇರಿದ ಸರವಣನ್ 2008 ರಿಂದ ಸಚಿವ ಹುದ್ದೆಯಲ್ಲಿದ್ದಾರೆ. ಮಲೇಷಿಯಾದಲ್ಲಿ ಸುಮಾರು 1.7 ಮಿಲಿಯನ್ ಭಾರತೀಯ ಮೂಲದವರು ವಾಸಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+