ಲೋಕಸಭಾ ಸದಸ್ಯರ ವೇತನ ಏರಿಕೆಗೆ ಕೊಕ್ಕೆ

ಇಂದು ಸೋಮವಾರ ಸಚಿವ ಸಂಪುಟದ ಸಭೆಯಲ್ಲಿ ಸಮಸ್ಯೆಯನ್ನು ಇತ್ಯರ್ಥಗೊಳಿಸಲಾಗುವುದು ಎಂದು ಸರಕಾರ ಭರವಸೆ ಕೊಟ್ಟಿತ್ತು. ಆದರೆ ಇಂದಿನ ಸಭೆಯಲ್ಲಿ ಒಂದು ನಿರ್ಧಾರಕ್ಕೆ ಬರಲಾಗದ ಸರಕಾರ ಸಂಬಳ ಹೆಚ್ಚಿಸುವಿಕೆ ವಿಚಾರವನ್ನು ಮುಂದಕ್ಕೆ ತಳ್ಳಿತು.
ತಮಗೆ ಬರುತ್ತಿರುವ ಮಾಸಿಕ 16,000 ಸಂಬಳವನ್ನು ಕನಿಷ್ಠ 50,000 ರು.ಗಳಿಗೆ ಏರಿಸಬೇಕು ಹಾಗೂ ಭತ್ಯೆಯನ್ನು 1,000 ದಿಂದ 2,000 ರು.ಗಳಿಗೆ ಏರಿಸಬೇಕೆನ್ನುವುದು ಸದಸ್ಯರ ಒಕ್ಕೊರಲ ಬೇಡಿಕೆಯಾಗಿದೆ.
ಸದ್ಯ ಲೋಕಸಭಾ ಸದಸ್ಯರು ಪಡೆಯುತ್ತಿರುವ ಸಂಬಳ ಕಡಿಮೆಯಾಗಿದೆ. ಆದ್ದರಿಂದ ಅದನ್ನು ಹೆಚ್ಚಿಸಬೇಕು ಎಂದು ಸಂಸದೀಯ ಸಮಿತಿ ಈ ಮುಂಚೆ ಶಿಫಾರಸ್ಸು ಮಾಡಿತ್ತು. ಸದಸ್ಯರೊಬ್ಬರಿಗೆ ಮಾಸಿಕ 80,000 ರು.ಗಳಾದರೂ ವರಮಾನ ಇರಬೇಕು ಎನ್ನುವುದು ಶಿಫಾರಸ್ಸು.
ಓದಿ : ಲೋಕಸಭೆಯೆಂಬ ಕೋಟ್ಯಧಿಪತಿಗಳ ಕ್ಲಬ್












Click it and Unblock the Notifications