ಅಮೆರಿಕಾದಲ್ಲಿ ಆಪಲ್ ಕಂಪನಿ ಲಂಚ ಪ್ರಪಂಚ

Apple black logo
ನ್ಯೂಯಾರ್ಕ್, ಆ. 16 : ಲಂಚ ಪಡೆದು ಕಂಪನಿಯ ಮಹತ್ವದ ಮಾಹಿತಿಗಳನ್ನು ಏಷಿಯಾದ ಕೆಲ ಹಾರ್ಡವೇರ್ ಎಜೆನ್ಸಿಗಳಿಗೆ ರವಾನಿಸಿರುವ ಆರೋಪದ ಮೇಲೆ ಪ್ರತಿಷ್ಠಿತ ಆಪಲ್ ಸಾಫ್ಟ್ ವೇರ್ ಕಂಪನಿ ಮ್ಯಾನೇಜರ್ ನನ್ನು ಬಂಧಿಸಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ಆಪಲ್ ಮ್ಯಾನೇಜರ್ ಪಾಲ್ ಡೇವಿನ್ ಬಂಧಿತ ವ್ಯಕ್ತಿಯಾಗಿದ್ದರೆ, ಕಂಪನಿಗೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಲಂಚಕ್ಕಾಗಿ ಏಷಿಯಾದ ಏಜೆನ್ಸಿಗಳಿಗೆ ನೀಡಿದ್ದಾರೆ. ಮುಖ್ಯವಾಗಿ ಬೆಲೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಡೇವಿನ್ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಡೇವಿನ್ ಅವರು ಐಪೋಡ್ ಮತ್ತು ಐಫೋನ್ ಗಳ ಹೆಡ್ ಸೆಟ್ ಗಳ ವ್ಯಾಪಾರ ವಹಿವಾಟು ಸೇರಿ ಒಟ್ಟಾರೆ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು.

ಆಪಲ್ ಕಂಪನಿಯೂ ಅತ್ಯಂತ ವಿಶ್ವಾಸಾರ್ಹಕ್ಕೆ ಪಾತ್ರವಾದ ಕಂಪನಿಯಾಗಿದೆ. ಕಂಪನಿಯ ಹೊರಗೆ ಮತ್ತು ಕಂಪನಿಯ ಒಳಗಿನ ಎಲ್ಲಾ ಮಾಹಿತಿಗಳನ್ನು ಗೌಪ್ಯತೆಯಿಂದ ಕಾಪಾಡಿಕೊಂಡು ಬರಲಾಗಿದೆ. ಆದರೆ, ಇತ್ತೀಚೆಗೆ ನಡೆದ ಘಟನೆಗೆ ವಿಷಾದಿಸುತ್ತೇವೆ. ಇದನ್ನು ನಾವು ಸಹಿಸುವುದಿಲ್ಲ. ಲಂಚ ಪಡೆದು ಮಾಹಿತಿಗಳನ್ನು ನೀಡುವುದು ಕಾನೂನು ಬಾಹಿರ ಎಂದು ಆಪಲ್ ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಡೇವಿನ್ ಅವರು ತಮ್ಮ ಪತ್ನಿಯ ಹೆಸರಿನಲ್ಲಿ ಕ್ಯಾಲಿಪೂರ್ನೀಯಾದಲ್ಲಿ ಕಂಪನಿಯೊಂದನ್ನು ನಡೆಸುತ್ತಿದ್ದಾರೆ. ಲಂಚದ ಹಣವನ್ನು ಅವರ ಪತ್ನಿಯ ಹೆಸರಿನಲ್ಲಿ ಪಾವತಿಸುವಂತೆ ಏಜೆನ್ಸಿಗಳಿಗೆ ಡೇವಿನ್ ಸೂಚಿಸಿರುವುದು ಗೊತ್ತಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+