ಆಟೋ ದರ ಪಟ್ಟಿ ಈಗ ಮೊಬೈಲ್ ನಲ್ಲೆ ಲಭ್ಯ

Auto fare converter Apps
ಬೆಂಗಳೂರು, ಆ.10: ಆಟೋದಲ್ಲಿ ಹೋಗುವಾಗೆಲ್ಲಾ ಪರಿಷ್ಕೃತ ದರ ಪಟ್ಟಿಯ ಪ್ರಿಂಟ್ ಔಟ್ ಹಿಡಿದುಕೊಂಡು ಹೋಗೊದು ಕಷ್ಟ ಎಂಬುದನ್ನು ಅರಿತ ನಗರದ ಟೆಕ್ಕಿಯೊಬ್ಬರು ಇದಕ್ಕೆ ಸುಲಭ ಉಪಾಯ ಕಂಡು ಹಿಡಿದಿದ್ದಾರೆ. ಮೊಬೈಲ್ ನಲ್ಲಿ ಸರಿಯಾದ ದರಪಟ್ಟಿ ಆವರ್ತಕವನ್ನು ತೋರಿಸುವ Apps ತಂತ್ರಾಂಶ ಸಾಧಕವನ್ನು ರೂಪಿಸಿದ್ದಾರೆ.

ನಿಮ್ಮ ಮೊಬೈಲ್ ಜಾವಾ ಆಧಾರಿತವಾಗಿದ್ದರೆ, ಸುಲಭದಲ್ಲಿ ಹೊಸ ಮೀಟರ್ ದರ ಬೆರಳ ತುದಿಗೆ ಸಿಗಲಿದೆ. ಥಾಟ್ಸ್ ವರ್ಕ್ಸ್ ನಲ್ಲಿ ಕೆಲಸ ಮಾಡುತ್ತಿರುವ 32ವರ್ಷದ ಟೆಕ್ಕಿ ಶ್ರೀಕಾಂತ್ ಶೇಷಾದ್ರಿ ಈ ಸಾಧಕವನ್ನು ರೂಪಿಸಿದವರು. ಮೊಬೈಲ್ ಫೋನ್ ನಲ್ಲಿ ಆಟೋ ಮೀಟರ್ ದರ ಹಾಕಿ ನಾವು ಕೊಡಬೇಕಾದ ದರವನ್ನು ಕಾಣಬಹುದು.

ಈಗಿರುವ ಹಳೆ ಮೀಟರ್ ಗಳನ್ನು ಬದಲಿಸಿ ಹೊಸ ಮೀಟರ್ ಅಳವಡಿಸಿಕೊಳ್ಳಲು ಸರ್ಕಾರ ಎರಡು ತಿಂಗಳ ಅವಧಿ ನೀಡಿದೆ. ಅಲ್ಲಿ ತನಕ ಆಟೋ ದಲ್ಲಿ ಪಯಣಿಸುವವರ ಅನುಕೂಲಕ್ಕಾಗಿ ಈ ಅನ್ವಯ ತಂತ್ರಾಂಶ ಸಾಧಕವನ್ನು ರೂಪಿಸಿದ್ದೇನೆ. ಹಳೆ ದರ ಹಾಕಿ ಪರಿಷ್ಕೃತ ದರವನ್ನು ತಕ್ಷಣ ಪಡೆಯಬಹುದು.

ಈ ತಂತ್ರಾಂಶದ ಬಗ್ಗೆ ಹೆಚ್ಚಿನ ಮಾಹಿತಿ ಬಯಸುವವರು ಶ್ರೀಕಾಂತ್ ಅವರ ಬ್ಲಾಗ್ ಗೆ ಭೇಟಿ ನೀಡಬಹುದು. ಜಾವಾ ಆಧಾರಿತ ಮೊಬೈಲ್ ಫೋನ್ ಹಾಗೂ ಆಂಡ್ರ್ಯಾಡ್ ಫೋನ್ ಗಳಾದ HTC ಹೀರೋ ಅಥವಾ ಮೋಟರೋಲಾ ಡ್ರಾಡ್ ನಲ್ಲಿ ಬಳಸಬಹುದಾಗಿದೆ.

ಈ ತಂತ್ರಾಂಶವನ್ನು ತಮ್ಮ ಮೊಬೈಲ್ ಗೆ ಇಳಿಸಿಕೊಳ್ಳಿ:
* ಜಾವಾ ಆಧಾರಿತ ಮೊಬೈಲ್ ಫೋನ್ App
* ಆಂಡ್ರ್ಯಾಡ್ App

ಬಳಕೆ ಹೇಗೆ:
*ಮೀಟರ್ ತೋರಿಸುವ ದರವನ್ನು ಹಾಕಿ
* ಕನ್ವರ್ಟರ್ ಬಟನ್ ಒತ್ತಿ
* ನೀವು ಚಾಲಕರಿಗೆ ನೀಡಬೇಕಾದ ದರ ಪಡೆಯಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+