ಗರ್ಭಿಣಿ ಮಹಿಳೆಗೆ ತಾಲಿಬಾನ್ ಗುಂಡು
ಲಂಡನ್,
ಆ. 10 : ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಏಕೈಕ ಕಾರಣಕ್ಕಾಗಿ ತಾಲಿಬಾನ್ ಮುಖ್ಯಸ್ಥರು ಗರ್ಭಿಣಿ ಮಹಳೆಯನ್ನು ಸಾರ್ವಜನಿಕ ಸ್ಥಳದಲ್ಲಿ ಗುಂಡಿಟ್ಟು ಕೊಲ್ಲುವಂತೆ ಆದೇಶಿಸಿರುವ ಪೈಶಾಚಿಕ ಘಟನೆ ಪಶ್ಚಿಮ ಅಪಘಾನಿಸ್ತಾನದಿಂದ ವರದಿಯಾಗಿದೆ. id="toptextpromo">ಮೂವರು
ತಾಲಿಬಾನ್ ಮುಖ್ಯಸ್ಥರನ್ನೊಳಗೊಂಡ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ಸಂಬಂಧ ಹೊಂದುವವರಿಗೂ ಕೂಡಾ ಇಂತಹ ಶಿಕ್ಷೆ ಕಾಯ್ದಿದೆ. ಈ ಘಟನೆ ಎಲ್ಲರಿಗೂ ಒಂದು ಉದಾಹರಣೆಯಾಗಲಿ ಎಂಬ ಕಾರಣದಿಂದ ಅಪರಾಧಿಯನ್ನು ಸಾರ್ವಜನಿಕ ಸ್ಥಳದಲ್ಲಿ ಎಲ್ಲರೆದುರಿಗೂ ಗುಂಡಿಟ್ಟು ಕೊಲ್ಲುವಂತೆ ಆದೇಶಿಸಲಾಗಿದೆ. ಇದರಿಂದ ಎಲ್ಲರೂ ಪಾಠ ಕಲಿಯಬೇಕು ಎಂದು ತಾಲಿಬಾನ್ ವಕ್ತಾರ ಮುಲ್ಲಾ ದಾವೂದ್ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪಶ್ಚಿಮ
ಅಪಘಾನಿಸ್ತಾನ ಬಾದಗೀಸ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಈ ಪ್ರದೇಶ ತಾಲಿಬಾನ್ ಉಗ್ರರ ವಶದಲ್ಲಿದೆ. ಗರ್ಭಿಣಿ ಮಹಿಳೆಯನ್ನು ಸಾರ್ವಜನಿಕವಾಗಿ ಹತ್ಯೆ ಮಾಡಿರುವ ತಾಲಿಬಾನಿಗಳು ಆಕೆಯ ಶವವನ್ನು ಸರಕಾರಿ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ ಎಂದು ಅಪಘಾನಿಸ್ತಾನ ಸರಕಾರ ಹೇಳಿದೆ.











Click it and Unblock the Notifications