ವಿಶ್ವ ಶೂಟಿಂಗ್ : ದಾಖಲೆ ಸರಿಗಟ್ಟಿದ ತೇಜಸ್ವಿನಿ

Tejaswini Sawant
ನವದೆಹಲಿ, ಆ. 9 : ಭರವಸೆಯ ಪ್ರತಿಭೆ ತೇಜಸ್ವಿನಿ ಸಾವಂತ್ ವಿಶ್ವ ಶೂಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜರ್ಮನಿಯ ಮ್ಯೂನಿಚ್ ನಲ್ಲಿ ನಡೆದ ವಿಶ್ವ ಚಾಂಪಿಯನ್ ಷಿಪ್ ನಲ್ಲಿ 50 ಮೀಟರ್ ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ತೇಜಸ್ವಿನಿ ಸಾವಂತ್ ಒಟ್ಟು 600 ಕ್ಕೆ 597 ಅಂಕಗಳನ್ನು (100, 100, 100, 99, 99, 99) ಸಂಪಾದಿಸಿ ಮೊದಲ ಸ್ಥಾನ ಪಡೆದರು. ಇದರೊಂದಿಗೆ ಅವರು 1998ರಲ್ಲಿ ರಷ್ಯಾದ ಮಾರಿನಾ ಬೊಬೆನ್ ಸ್ಥಾಪಿಸಿದ ವಿಶ್ವ ದಾಖಲೆ ಸಾಧನೆಯನ್ನು ಅವರು ಸರಿಗಟ್ಟಿದರು.

ಮೆಲ್ಬೋರ್ನ್ ಕಾಮನ್ ವೆಲ್ತ್ ಗೇಮ್ಸ್ ನ ಏರ್ ರೈಫಲ್ ಸ್ಪರ್ಧೆಗಳಲ್ಲಿ ಎರಡು ಚಿನ್ನದ ಪದಕ ಗೆದ್ದುಕೊಂಡಿದ್ದ 29 ವರ್ಷದ ತೇಜಸ್ವಿನಿ ಅಂತಿಮ ಸ್ಕೋರ್ ನಲ್ಲಿ ಪೋಲೆಂಡ್ ನ ಎವಾ ಜೋವಾನಾ ನೋಮಾಕೊವಸ್ಕ್ ಅವರನ್ನು ಸರಿಗಟ್ಟಿದರು. ಆದರೆ, ಅಂತಿಮವಾಗಿ ಅತ್ಯುತ್ತಮ ಅಂಕಗಳಿಕೆಯ ಆಧಾರದ ಮೇಲೆ ಮೊದಲ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಅರ್ಹರಾದರು.

ಕೊಲ್ಲಾಪುರದ ತೇಜಸ್ವಿನಿ ಸಾವಂತ್ ವಿಶ್ವ ದಾಖಲೆ ಸಾಧನೆ ಮಾಡಿದ ಭಾರತದ ಕೇವಲ ಐದನೇ ಶೂಟರ್ ಆಗಿದ್ದಾರೆ. ಇದಕ್ಕೂ ಮುನ್ನ ಗಗನ್ ನಾರಂಗ್, ಸುಮಾ ಶಿರೂರ್, ರಂಜನ್ ಸಿಂಗ್ ಸೋಧಿ ಮತ್ತು ಅಶೇರ್ ಮಾರಿಯಾ ಈ ಸಾಧನೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+