ಇನ್ಫಿ ಮೂರ್ತಿ ಮಗನಿಗೆ ಕಂಕಣ ಬಲ

Rohan Murthy Lakshmi Venu
ಬೆಂಗಳೂರು, ಆ. 8 : ಇನ್ಫೋಸಿಸ್ ಅಧ್ಯಕ್ಷ ಎನ್ ಆರ್ ನಾರಾಯಣಮೂರ್ತಿ ಅವರ ಮಗ ಎನ್ ಆರ್ ರೋಹನ್ ಮೂರ್ತಿ ಚೆನ್ನೈ ಮೂಲದ ಟಿವಿಎಸ್ ಕಂಪನಿ ಅಧ್ಯಕ್ಷ ವೇಣು ಶ್ರೀನಿವಾಸನ್ ಅವರ ಮಗಳು ಲಕ್ಷ್ಮಿ ವೇಣು ಅವರೊಂದಿಗೆ ವಿವಾಹ ನಿಶ್ಚಿತಾರ್ಥ ಶೀಘ್ರದಲ್ಲಿ ನಡೆಯಲಿದೆ.

ಹೌದು, ಮೊನ್ನೆಯಷ್ಟೇ ರೋಹನ್ ಸಲ್ಲಿಸಿದ ವಿವಾಹ ಪ್ರಸ್ತಾವವನ್ನು ಲಕ್ಷ್ಮಿ ಒಪ್ಪಿಕೊಂಡಿದ್ದಾರೆ. ಕಳೆದ ಆರು ತಿಂಗಳಿಂದ ಅವರಿಬ್ಬರು ಉತ್ತಮ ಸ್ನೇಹಿತರಾಗಿದ್ದರು. ಮದುವೆ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ. ಮದುವೆ ದಿನಾಂಕವನ್ನು ನಿರ್ಧರಿಸುವುದನ್ನು ವಧುವರರಿಗೆ ಬಿಟ್ಟಿದ್ದೇವೆ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.

28 ವರ್ಷದ ರೋಹಮ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಇದಲ್ಲದೇ ಮೈಕ್ರೋಸಾಫ್ಟ್ ಸಂಶೋಧನಾ ಶಿಷ್ಯವೇತನವನ್ನು ಪಡೆದಿದ್ದಾರೆ. ಇನ್ಫೋಸಿಸ್ ಕಂಪನಿಯಲ್ಲಿ ಶೇ.2 ರಷ್ಟು ಪಾಲು ಹೊಂದಿದ್ದಾರೆ. ಲಕ್ಷ್ಮಿ ಅವರಿಗೂ ಕೂಡ 27 ವರ್ಷ. ಬ್ರಿಟನ್ ವಾರ್ ವಿಕ್ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಮ್ಯಾನೇಜ್ ಮೆಂಟ್ ವಿಷಯದಲ್ಲಿ ಡಾಕ್ಟರೇಟ್ ಪಡೆದುಕೊಂಡಿದ್ದಾರೆ. ಟಿವಿಎಸ್ ಗ್ರೂಫ್ ಕಂಪನಿಯ ಆಡಳಿತ ಮಂಡಳಿಯ ಸದಸ್ಯೆಯೂ ಆಗಿದ್ದಾರೆ.

ವೇಣು ಶ್ರೀನಿವಾಸನ್ ಹಾಗೂ ಅವರ ಪತ್ನಿ ಮಲ್ಲಿಕಾ ಅವರ ಜೊತೆ ಬಹಳ ವರ್ಷದಿಂದ ಸ್ನೇಹವಿದೆ. ರೋಹನ್ ಮತ್ತು ಲಕ್ಷ್ಮಿ ಅವರಿಂದಾಗಿ ನಾವೀಗ ಸಂಬಂಧಿಕರಾಗುತ್ತಿದ್ದೇವೆ ಎಂದು ಮೂರ್ತಿ ಹೇಳಿದರು. ಚೆನ್ನೈನಲ್ಲಿ ಮದುವೆ, ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದೆ. ಬಹುಶಃ ಇದೇ ವರ್ಷದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಕಳೆದ ವರ್ಷ ಮೂರ್ತಿ ಮಗಳು ಅಕ್ಷತಾ ಹಾಗೂ ಅವರ ರಿಶಿ ಸುನಾಕ್ ಅವರೊಂದಿಗೆ ಬೆಂಗಳೂರಿನಲ್ಲಿ ಮದುವೆಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+