ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಾವಳಿ ಜನತೆಗೋಸ್ಕರ ಕೇಂದ್ರಕ್ಕೆ ಅಹವಾಲು

By Shami
|
Google Oneindia Kannada News

Karnataka MPs meet central minister Muniyappa
ನವದೆಹಲಿ, ಆ.5 : ಉಡುಪಿ ಲೋಕಸಭಾ ಕ್ಷೇತ್ರದ ಸದಸ್ಯ ಡಿವಿ ಸದಾನಂದಗೌಡ, ದಕ್ಷಿಣ ಕನ್ನಡ ಲೋಕಸಭಾಸದಸ್ಯ ನಳಿನ್ ಕುಮಾರ್ ಕಟೀಲ್ ಮತ್ತು ಉತ್ತರ ಕನ್ನಡದ ಎಂಪಿ ಅನಂತ್ ಕುಮಾರ್ ತ್ರಿಮೂರ್ತಿಗಳು ಗುರುವಾರ ಕೇಂದ್ರದ ಇಬ್ಬರು ಸಚಿವರುಗಳನ್ನು ನವದೆಹಲಿಯಲ್ಲಿ ಭೇಟಿಮಾಡಿ ಕರ್ನಾಟಕದ ಹಲಕೆಲವು ಬೇಡಿಕೆಗಳನ್ನು ಕೇಂದ್ರ ಸರಕಾರದ ಮುಂದಿಟ್ಟರು.

ಕೃಷಿ ಸಚಿವ ಶರದ್ ಪವಾರ್ ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ ಎಂ ಮುನಿಯಪ್ಪ ಅವರನ್ನು ಕರಾವಳಿ ಕರ್ನಾಟಕದ ಈ ಮೂರೂ ಸದಸ್ಯರು ಭೇಟಿಮಾಡಿ ತಮ್ಮ ಭಾಗದ ಜನತೆಯ ಬೇಡಿಕೆಗಳನ್ನು, ಆಗದೇ ಉಳಿದ ಕೆಲಸಗಳನ್ನು ಪೂರ್ಣಗೊಳಿಸಬೇಕೆಂದು ಈ ಭಾಗದ ರೈಲು ಪ್ರಯಾಣಿಕರ ಪರವಾಗಿ, ಮತ್ತು ಬೆಳೆಗಾರರ ಪರವಾಗಿ ವಿನಂತಿಸಿಕೊಂಡರು.

ಕೃಷಿ ವಿಭಾಗದ ಬೇಡಿಕೆಗಳು ಇಂತಿವೆ :

ಅ) ಅಡಿಕೆಗೆ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕು.
ಆ) ಅಡಿಕೆ ಆಮದು ಮಾಡಿಕೊಳ್ಳುವುದನ್ನು ಭಾರತ ನಿಲ್ಲಿಸಬೇಕು.
ಇ) ಅಕ್ರಮವಾಗಿ ದೇಶದೊಳಗೆ ನುಸುಳುವ ಅಡಿಕೆ ಸಾಗಾಣಿಕೆ ಜಾಲವನ್ನು ಮಟ್ಟ ಹಾಕಹೇಕು.
ಈ) ಅಡಿಕೆ ಬೆಳೆಗಾರರಿಗೆ ಸೂಕ್ತ ಪ್ಯಾಕೇಜ್ ಘೋಷಣೆ ಮಾಡಬೇಕು.

ರೈಲು ಸಂಚಾರ ಮತ್ತು ಸಾರಿಗೆ ಬೇಡಿಕೆಗಳು:

ಅ) ರೈಲು ಸಂಖ್ಯೆ 6517/6518 ಅನ್ನು ಕಾರವಾರದವರೆಗೆ ವಿಸ್ತರಿಸಬೇಕು.
ಆ) ಮುಂಬೈ ಕಾರವಾರ ರೈಲು ಮಾರ್ಗವನ್ನು ಮಂಗಳೂರುತನಕ ವಿಸ್ತರಿಸಬೇಕು.

ನಿವೇದನಾ ಪತ್ರದ ಮೂಲಕ ಸಲ್ಲಿಸಲಾದ ಕರಾವಳಿ ಕರ್ನಾಟಕಕ್ಕೆ ಸಂಬಂಧಿಸಿದ ಅಹವಾಲುಗಳನ್ನು ರೈಲು ಮತ್ತು ಕೃಷಿ ಸಚಿವರು ಸ್ವೀಕರಿಸಿದರು.(ಚಿತ್ರ ನೋಡಿ)ಕರ್ನಾಟಕದ ಬೇಡಿಕೆಗಳಿಗೆ ಸಂಬಂಧಿಸಿದ ಖಾತೆಯ ಅಧಿಕಾರಿಗಳು ಮತ್ತು ಸಚಿವರು ಈ ಬೇಡಿಕೆಗಳ ಈಡೇರಿಕೆಗೆ ಅನುಕೂಲಕರವಾಗಿ ಸ್ಪಂದಿಸುವರೇ ಎಂದು ಕರಾವಳಿ ಜನತೆ ದೆಹಲಿಯತ್ತ ಮುಖಮಾಡಿ ನೋಡುತ್ತಿರುವರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X