ಹಲ್ಲುಜ್ಜದ ಗಂಡನೊಂದಿಗೆ ನಾ ಹೇಗೆ ಬಾಳಲಿ!
ಲಖನೌ,
ಆ. 4 : ವರದಕ್ಷಿಣೆ ಕಿರುಕುಳ ತಾಳಲಾರದೆ ಗಂಡನಿಗೆ ವಿಚ್ಛೇದನ ನೀಡುವುದು ಸಾಮಾನ್ಯ. ಆದರೆ, ಗಂಡ ಸರಿಯಾಗಿ ಹಲ್ಲುಜ್ಜುವುದಿಲ್ಲ. ನೀಟಾಗಿ ಡ್ರೆಸ್ ಮಾಡುವುದಿಲ್ಲ ಎಂದು ವಿಚ್ಛೇದನ ನೀಡುವುದು ವಿರಳ. ಇಂತಹ ಅಪರೂಪದ ಘಟನೆಯೊಂದು ಉತ್ತರ ಪ್ರದೇಶದ ಬಾಗಪತ್ ಜಿಲ್ಲೆಯ ಬರಾತ್ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. id="toptextpromo">ಸುನೀತಾ
ಎಂಬಾಕೆ ವಿಚ್ಛೇದನಕ್ಕೆ ಮುಂದಾಗಿರುವ ಮಹಿಳೆ. ದೆಹಲಿ ಮೂಲದ ಟ್ರಕ್ ಚಾಲಕನಾಗಿರುವ ರಮೇಶ್ ಎಂಬಾತನೊಂದಿಗೆ ಕೆಲವು ದಿನಗಳ ಹಿಂದೆ ಮದುವೆಯಾಗಿತ್ತು. ಸುನೀತಾ ಈಗಾಗಲೇ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ನನ್ನ ಗಂಡ ದಿನಾ ಬೆಳಗ್ಗೆ ಹಲ್ಲುಜ್ಜುವುದಿಲ್ಲ. ಆರೋಗ್ಯಪೂರ್ಣವಾಗಿ ಆತನೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ. ಮದುವೆಯಾದ ನಂತರವೇ ಆತನ ಗಲೀಜು ಜೀವನ ಗೊತ್ತಾಗಿದ್ದು, ಹೀಗಾಗಿ ನನಗೆ ಇದರಿಂದ ಮುಕ್ತಿ ಕೊಡಿ ಎಂದು ಅರ್ಜಿಯಲ್ಲಿ ವಿವರಿಸಿದ್ದಾಳೆ. id='are-slot-1' class='oiad oi-axt oiadv'> id='top-searched-articles'>ಪೊಲೀಸರು
ಮತ್ತು ಆಕೆಯ ಮನೆಯವರು ಮನವೊಲಿಸಲು ಪ್ರಯತ್ನಿಸಿದರಾದರೂ ಫಲ ನೀಡಿಲ್ಲ. ಪೊಲೀಸ್ ಠಾಣೆಯಲ್ಲೇ ಗಂಡನೊಂದಿಗೆ ಜಗಳ ಕಾದ ಪ್ರಸಂಗವೂ ನಡೆದಿದೆ.











Click it and Unblock the Notifications