ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿ ಮಸೂದೆಯ ಕರಡು ತಿದ್ದುತ್ತಿರುವ ಸರ್ಕಾರ

By Mahesh
|
Google Oneindia Kannada News

Pranab Mukherjee
ನವದೆಹಲಿ, ಆ.4: ಕೇಂದ್ರ ಗಣಿ ಸಚಿವಾಲಯ ಹೊಸ ಗಣಿ ಮಸೂದೆಯ ಕರಡನ್ನು ಸಿದ್ದಪಡಿಸುವಿಕೆಯ ಪ್ರಕ್ರಿಯೆಯಲ್ಲಿ ತೊಡಗಿದೆ. ಈ ನೂತನ ಮಸೂದೆಯಲ್ಲಿ ಗಣಿ ಕಂಪೆನಿಗಳು ಗಳಿಸಿದ ಶೇ.26 ರಷ್ಟು ಲಾಭವನ್ನು ಸ್ಥಳಿಯ ಪ್ರದೇಶ ಅಭಿವೃದ್ಧಿಗೆ ನೀಡಬೆಕಾಗುತ್ತದೆ ಅಲ್ಲದೆ ಅಕ್ರಮ ಗಣಿಗಾರಿಕೆ ತಡೆಗೆ ನಿಯಂತ್ರಣ ಪ್ರಾಧಿಕಾರವನ್ನು ರಚಿಸಬೇಕಾಗುತ್ತದೆ.

ಸಿದ್ದಪಡಿಸಿದ ಕರಡನ್ನು ಲೋಕಸಭೆಯಲ್ಲಿ ಮಂಡಿಸುವದಕ್ಕೂ ಮೊದಲು ಉನ್ನತಾಧಿಕಾರದ ಸಚಿವರ ಸಮಿತಿಗೆ ಅನುಮೋದನೆಗಾಗಿ ಸಲ್ಲಿಸಲಾಗುವುದು. ಆದರೆ ಲಾಭದ ಶೇ.26 ರಷ್ಟನ್ನು ಸ್ಥಳಿಯರಿಗೆ ಮತ್ತು ಬುಡಕಟ್ಟು ಜನಾಂಗದ ಅಭಿವೃದ್ದಿಗೆ ನೀಡುವುದಕ್ಕೆ ಉದ್ಯಮಿಗಳು ಹಾಗೂ ಫಿಕ್ಕಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈಗಿನ ಲೋಕಸಭಾ ಅಧಿವೇಶನದಲ್ಲಿ ಮಸೂದೆಯನ್ನು ಮಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಕೇಂದ್ರ ಗಣಿ ಕಾರ್ಯದರ್ಶಿ ವಿಜಯ್ ಕುಮಾರ್ ತಿಳಿಸಿದ್ದಾರೆ ಹೊಸ ಗಣಿ ಕಾಯ್ದೆ 1957ರ ಗಣಿ ಕಾಯ್ದೆಯನ್ನು ರದ್ದುಪಡಿಸಲಿದೆ.

ಕಳೆದ ಜುಲೈ 20 ಹಾಗೂ ಜುಲೈ 30ರಂದು ಸಭೆ ಸೇರಿದ್ದ ಉನ್ನತಾಧಿಕಾರದ ಸಚಿವರ ಸಮಿತಿ ಹಿಂದಿನ ಕರಡನ್ನು ಪರಿಶೀಲಿಸಿದ್ದು, ಶೇ.26 ರಷ್ಟು ಲಾಭಾಂಶವನ್ನು ಭೂ ಮಾಲೀಕರಿಗೆ, ಮತ್ತು ತೊಂದರೇಗೀಡಾದ ಕುಟುಂಬಗಳಿಗೆ ನೀಡಬೇಕೆಂದು ನಿರ್ಧರಿಸಿತ್ತು.

ಈಗ ಅಂತಿಮ ಕರಡನ್ನು ಸಿದ್ದಪಡಿಸಲಾಗುತ್ತಿದ್ದು ಲಾಭಾಂಶದ ಹಂಚಿಕೆಯ ಕುರಿತು ಅಂತಿಮ ನಿರ್ದಾರ ಕೈಗೊಳ್ಳಲಿದೆ. ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅದ್ಯಕ್ಷತೆಯ ಉನ್ನತಾಧಿಕಾರದ ಸಮಿತಿಯಲ್ಲಿ ಗೃಹ ಸಚಿವ ಪಿ ಚಿದಂಬರಂ, ಉಕ್ಕು ಸಚಿವ ವೀರಭದ್ರ ಸಿಂಗ್, ಕಾನೂನು ಸಚಿವ ವೀರಪ್ಪ ಮೊಯ್ಲಿ, ಗಣಿ ಸಚಿವ ಬಿಕೆ ಹಂಡಿಕ್, ವಾಣಿಜ್ಯ ಸಚಿವ ಆನಂದ್ ಶರ್ಮ, ಬುಡಕಟ್ಟು ವ್ಯವಹಾರಗಳ ಸಚಿವ ಕೆ ಭುರಿಯಾ, ಕಲ್ಲಿದ್ದಲು ಸಚಿವ ಪ್ರಕಾಶ್ ಜೈಸ್ವಾಲ್ , ಪರಿಸರ ಸಚಿವ ಜೈ ರಾಮ್ ರಮೇಶ್, ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಇದ್ದಾರೆ. ಮುಂದಿನ ಸಭೆಯ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X