ಇರಾಕಿನಲ್ಲಿ ಕತ್ತಿವರಸೆಗೆ ಅಮೆರಿಕಾ ಗುಡ್ ಬೈ

ಬರಲಿರುವ ವಾರಗಳಲ್ಲಿ ಅಮೆರಿಕಾದ 15,000 ತುಕಡಿಗಳನ್ನು ಇರಾಕಿನಿಂದ ವಾಪಸ್ಸು ಕರೆಸಿಕೊಳ್ಳಲಾಗುತ್ತದೆ. ಸೇನೆಯನ್ನು ಇರಾಕಿನಿಂದ ತೆರವುಗೊಳಿಸುವ ಅಮೆರಿಕಾದ ನಿಲುವಿನ ಕೊನೆಯ ಹಂತ ಇದಾಗಿರುತ್ತದೆ. ಇರಾಕಿನ ಬಗೆಗೆ ಅಮೆರಿಕಾದ ನಿಲವು ಹಂತಹಂತವಾಗಿ ಬದಲಾಗುತ್ತಿದೆ. ಇಲ್ಲಿ ತಪ್ಪಿಗೆ ಆಸ್ಪದವೇ ಇಲ್ಲ. ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಮತ್ತು ಮಧುರ ಸಂಬಂಧಗಳನ್ನು ಪುನಃ ಪ್ರತಿಷ್ಠಾಪಿಸುವುದಕ್ಕೆ ತಾವು ಬದ್ಧ ಎಂದು ಒಬಾಮಾ ಫೋಷಿಸಿದ್ದಾರೆ. ರಾಜತಾಂತ್ರಿಕ ಮತ್ತು ನಾಗರಿಕ ಪ್ರಯತ್ನಗಳು ಕಾರ್ಯಶಿಲವಾಗುತ್ತವೆ, ಕತ್ತಿವರಸೆಗಳಿಗೆ ಗುಡ್ ಬೈ ಹೇಳಲಾಗುತ್ತದೆ ಎನ್ನುವುದು ಒಬಾಮಾ ಅವರ ಮಾತಿನ ಸಾರಾಂಶ.
ಅಮೆರಿಕಾದ ಯುದ್ಧ ಪಡೆಗಳು ಇರಾಕಿನಿಂದ ಮರಳಿ ಬಂದನಂತರ ಅಲ್ಲಿ ಉಳಿದಿರುವ ಇನ್ನೂ 50 ಸಾವಿರ ಯೋಧರು ಇರಾಕಿನ ಪಡೆಗಳಿಗೆ ತರಬೇತಿ ನೀಡುತ್ತವೆ. ಅಲ್ಲದೆ, ಭಯೋತ್ಪಾದನೆಯನ್ನು ಹಿಮ್ಮೆಟ್ಟಿಸುವುದಕ್ಕೆ ಆ ದೇಶದ ಯೋಧರಿಗೆ ಮಿಲಿಟರಿ ಕೌಶಲ್ಯಗಳನ್ನು ಹೇಳಿಕೊಡಲಾಗುತ್ತದೆ. ನಾಗರೀಕರ ಜೀವನ ಪುನಃ ಸುಸ್ಥಿಗೆ ಮರಳಬೇಕು, ಶ್ರೀಸಾಮಾನ್ಯನ ಬದುಕು ನಿರಾತಂಕವಾಗಿ ಸಾಗಬೇಕು ಎನ್ನುವುದೇ ಅಮೆರಿಕಾದ ಬದಲಾದ ಧೋರಣೆಗಳಾಗಿರುತ್ತವೆ ಎಂದು ಒಬಾಮ ಪುನರುಚ್ಛರಿಸಿದ್ದಾರೆ.
ಯುದ್ಧದಲ್ಲಿ ಹೋರಾಡಿ ಗಾಯಾಳುಗಳಾಗಿರುವ ಅಮೆರಿಕಾ ಸೈನಿಕರ ರಾಷ್ಟ್ರೀಯ ಅಧಿವೇಶನದಲ್ಲಿ ಮಾತನಾಡುತ್ತಾ ಒಬಾಮ ತಮ್ಮ ದೇಶದ ಒಲವು ನಿಲವುಗಳನ್ನು ತಮ್ಮ ಭಾಷಣದಲ್ಲಿ ಹಂಚಿಕೊಂಡರು.












Click it and Unblock the Notifications