ರಿಸೆಷನ್ ಹೊಡೆತಕ್ಕೆ 5 ಅಮೆರಿಕಾದ ಬ್ಯಾಂಕ್ ಬಲಿ

ಈ ವಾರ ಒರೆಗಾನ್ ನ ಲಿಬರ್ಟಿ ಬ್ಯಾಂಕ್ ಆಫ್ ಯೂಜೀನ್, ವಾಷಿಂಗ್ಟನ್ ನ ಕೌಲಿಟ್ ಬ್ಯಾಂಕ್ ಆಪ್ ಲಾಂಗ್ ವ್ಯೂ, ಫ್ಲೋರಿಡಾದ ಕೋಸ್ಟಲ್ ಕಮ್ಯುನಿಟಿ ಬ್ಯಾಂಕ್ ಆಫ್ ಬೀಚ್ ಸಿಟಿ, ಜಾರ್ಜಿಯಾದ ನಾರ್ತ್ ವೆಸ್ಟ್ ಬ್ಯಾಂಕ್ ಮತ್ತು ಟ್ರಸ್ಟ್ ಆಕ್ ವರ್ತ್ ಮತ್ತು ಫ್ಲೋರಿಡಾದ ಬೇ ಸೈಡ್ ಸೇವಿಂಗ್ಸ್ ಬ್ಯಾಂಕ್ ಆಪ್ ಪೋರ್ಟ್ ಸೈಂಟ್ ಜೊ ಮುಚ್ಚಲ್ಪಟ್ಟಿವೆ ಎಂದು ಫೆಡರಲ್ ಡಿಪಾಸಿಟ್ ಇನ್ಷೂರೆನ್ಸ್ ಕಾರ್ಪೊರೇಷನ್ ಹೇಳಿದೆ. ಈ ತ್ರೈಮಾಸಿಕದಲ್ಲಿ ಬ್ಯಾಂಕ್ ಗಳ ದಿವಾಳಿ ಸಂಖ್ಯೆ ಇನ್ನಷ್ಟು ಏರಲಿದೆ ಎಂದು ಅಂದಾಜಿಸಲಾಗಿದೆ.
ಈ 5 ಬ್ಯಾಂಕ್ ಗಳಲ್ಲಿ ಲಿಬರ್ಟಿ ಬ್ಯಾಂಕ್ 15 ಶಾಖೆಗಳನ್ನು ಹೊಂದಿದ್ದು 768 ಮಿಲಿಯನ್ ಡಾಲರ್ ಆಸ್ತಿ ಹಾಗೂ 718 ಮಿಲಿಯನ್ ಡಾಲರ್ ಠೇವಣಿ ಹೊಂದಿತ್ತು. ಸಣ್ಣ ಬ್ಯಾಂಕ್ ಆದ ಬೇ ಸೈಡ್ ಸೇವಿಂಗ್ಸ್ ಬ್ಯಾಂಕ್ 2 ಶಾಖೆ ಹೊಂದಿದ್ದು 66 ಮಿಲಿಯನ್ ಡಾಲರ್ ಆಸ್ತಿ ಹಾಗೂ 52.4 ಮಿಲಿಯನ್ ಡಾಲರ್ ಠೇವಣಿ ಹೊಂದಿತ್ತು.
ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹೊಡೆತಕ್ಕೆ ಸಿಕ್ಕು ಮುಚ್ಚಲ್ಪಟ್ಟ ಬ್ಯಾಂಕ್ ಗಳಲ್ಲಿ ವಾಷಿಂಗ್ಟನ್ ಮ್ಯೂಚುವಲ್ ಬ್ಯಾಂಕ್ ಅತೀ ದೊಡ್ಡ ಬ್ಯಾಂಕ್ ಆಗಿದ್ದು ಇದು 307 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದು 2008ರ ಸೆಪ್ಟೆಂಬರ್ ನಲ್ಲಿ ಇದನ್ನು ಮುಚ್ಚಲಾಗಿತ್ತು. ವೈಫಲ್ಯದ ಕಾರಣದಿಂದ ಅಮೆರಿಕಾದಲ್ಲಿ 1989ರ ಒಂದೇ ವರ್ಷ 534 ಬ್ಯಾಂಕ್ ಗಳು ಕದ ಹಾಕಿವೆ.












Click it and Unblock the Notifications