ಯೂನಿನಾರ್ 1 ಪೈಸೆ ಕರೆ ದರದಲ್ಲಿ ರಿಯಾಯ್ತಿ

Uninor offers discounts on 1 paise per second mobile tariff
ನವದೆಹಲಿ, ಜು.30: ಪ್ರಮುಖ ಟೆಲಿಕಾಂ ಕಂಪೆನಿ ತನ್ನ ಸೆಕೆಂಡಿಗೆ ಒಂದು ಪೈಸೆ ಕರೆ ದರದಲ್ಲಿ ಇಂದು ಭಾರೀ ರಿಯಾಯ್ತಿ ಪ್ರಕಟಿಸಿದ್ದು ಮೊಬೈಲ್ ಕಂಪೆನಿಗಳ ದರ ಸಮರವನ್ನು ಇನ್ನಷ್ಟು ತೀವ್ರಗೊಳಿಸಿದೆ.

ಸ್ಥಳ ಹಾಗೂ ಕರೆ ಸಮಯವನ್ನು ಆಧರಿಸಿ ಪ್ರತೀ ಸೆಕೆಂಡ್ ಗೆ ಒಂದು ಪೈಸೆ ದರದಲ್ಲಿ ಶೇ.60 ರಷ್ಟು ಕಡಿತ ಮಾಡಿರುವುದಾಗಿ ತಿಳಿಸಿದ್ದು, ಇನ್ನು ಗ್ರಾಹಕರು 24 ಪೈಸೆಗಳಲ್ಲಿ ಒಂದು ನಿಮಿಷ ಸ್ಥಳೀಯ ಹಾಗೂ ಎಸ್ ಟಿಡಿ ಕರೆ ಮಾಡಬಹುದಾಗಿದೆ ಎಂದು ಹೇಳಿದೆ.

ಯುನಿನಾರ್ ಈಗ ದೇಶದ 13 ರಾಜ್ಯಗಳಲ್ಲಿ ಸೇವೆ ಒದಗಿಸುತ್ತಿದೆ. ಹೊಸ ದರಗಳು 'ಡೈನಾಮಿಕ್ ಪ್ರೈಸಿಂಗ್' ಎಂಬ ಯೋಜನೆಯಡಿ ಲಭ್ಯವಿದ್ದು, 26 ರೂಪಾಯಿಗಳ ರೀಚಾರ್ಚ್ ಕೂಪನ್ ನೊಂದಿಗೆ ಮೂರು ತಿಂಗಳ ಅವಧಿಗೆ ದೊರೆಯಲಿದೆ.

ತನ್ನದೇ ನೆಟ್ ವರ್ಕ್ ನ ದೂರ ಸಂಪರ್ಕ ಗೋಪುರವನ್ನು ಬಳಸಿ ತನ್ನದೇ ನೆಟ್ ವರ್ಕ್ ಬಳಸುತ್ತಿರುವ ಮತ್ತೊಬ್ಬ ಗ್ರಾಹಕನೊಂದಿಗೆ ಮಾತನಾಡಿದರೆ ಹೆಚ್ಚು ರಿಯಾಯ್ತಿ ಸಿಗಲಿದೆ ಎಂದು ಕಂಪೆನಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+