Get Updates
Get notified of breaking news, exclusive insights, and must-see stories!

ಸೈನಾಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ

Saina Nehwal
ಹೈದರಾಬಾದ್, ಜು.30: ಭಾರತದ ಹೆಮ್ಮೆಯ ಬಾಡ್ಮಿಂಟನ್ ಆಟಗಾರ್ತಿ, ವಿಶ್ವದ ಎರಡನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್ ಅವರನ್ನು 'ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಭಾರತದಲ್ಲಿ ಕ್ರೀಡಾಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರುವ ಕ್ರೀಡಾಪಟುಗಳಿಗೆ ರಾಜೀವ ಗಾಂಧಿ ಖೇಲ್ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸೈನಾ ನೆಹ್ವಾಲ್ ಅವರ ತರಬೇತುದಾರ ಪಿ ಗೋಪಿಚಂದ್, 'ಸೈನಾ ಈ ಪ್ರಶಸ್ತಿ ಪಡೆಯಲು ಎಲ್ಲಾ ಅಹರ್ತೆ ಹೊಂದಿದ್ದಾರೆ. ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿದ್ದಾರೆ' ' ಎಂದಿದ್ದಾರೆ.

20 ವರ್ಷದ ಹೈದಾರಾಬಾದಿನ ಯುವ ಆಟಗಾರ್ತಿ ಸೈನಾ, ಕಳೆದ ಕೆಲ ವಾರಗಳ ಹಿಂದೆಯಷ್ಟೇ ವಿಶ್ವ ಬಾಡ್ಮಿಂಟನ್ ಶ್ರೇಯಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದರು. ಜು.15 ರಂದು ಬಿಡುಗಡೆಗೊಂಡ ಶ್ರೇಯಾಂಕ ಪಟ್ಟಿಯಂತೆ ಚೀನಾದ ಯಿಹಾನ್ ವಾಂಗ್ ಮಾತ್ರ ಸೈನಾಗಿಂತ ಮುಂದಿದ್ದಾರೆ.

ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಸೈನಾ, ಇಂಡೋನೇಷಿಯನ್ ಓಪನ್, ಸಿಂಗಪುರ್ ಓಪನ್ ಹಾಗೂ ಇಂಡಿಯಾ ಓಪನ್ ಗ್ರಾಂಡ್ ಪ್ರಿಕ್ಸ್ ಗಳನ್ನು ಗೆದ್ದು ಹ್ಯಾಟ್ರಿಕ್ ಪ್ರಶಸ್ತಿ ಗಳಿಸಿ ದಾಖಲೆ ಮೆರೆದಿದ್ದರು. ಈ ಮೂಲಕ ಆರನೇ ಶ್ರೇಯಾಂಕದಲ್ಲಿದ್ದ ಸೈನಾ ಎರಡನೇ ಶ್ರೇಯಾಂಕಕ್ಕೆ ಜಿಗಿದಿದ್ದರು.

ವಿಶ್ವದ ನಂ.1 ಬಾಡ್ಮಿಂಟನ್ ತಾರೆ ಎನಿಸಿಕೊಳ್ಳುವುದು ನನ್ನ ಗುರಿ ಎಂದಿರುವ ಸೈನಾ, ತನ್ನ ಈ ಸಾಧನೆ ಹಾಗೂ ಪ್ರಶಸ್ತಿ ಗಳಿಕೆಗೆ ಹೆತ್ತವರು ಹಾಗೂ ಕೋಚ್ ಅವರು ನೀಡಿದ ಬೆಂಬಲವೇ ಕಾರಣ ಎಂದು ಹರ್ಷದಿಂದ ಹೇಳುತ್ತಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+