ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಥನಿ ಸ್ಕೂಲ್ ಗೆ ಬೈದ ಕಪಿಲ್ ಸಿಬಲ್

By Mahesh
|
Google Oneindia Kannada News

Kapil Sibal
ಬೆಂಗಳೂರು, ಜು.30: ನಗರ ಪ್ರತಿಷ್ಠಿತ ಶಾಲೆ ಬೆಥನಿ ಶಾಲೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಕಪಿಲ್ ಸಿಬಲ್ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಬಡ ಮಕ್ಕಳನ್ನು ಕ್ರಿಮಿನಲ್ ಗೆ ಹೋಲಿಸಿ ಮಕ್ಕಳ ಪೋಷಕರಿಗೆ ಶಾಲೆ ನೀಡಿದ್ದ ಸುತ್ತೋಲೆ ಗೊಂದಲಕ್ಕೆ ಕಾರಣವಾಗಿದೆ.

Right to Education Act ಎಂಬ ಹೆಸರಿನ ಸುತ್ತೋಲೆಯನ್ನು ವಿದ್ಯಾರ್ಥಿಗಳ ಪೋಷಕರಿಗೆ ಕಳಿಸಿದ ಬೆಥನಿ ಶಾಲೆ ಆಡಳಿತ ಮಂಡಳಿ, ಬಡವರ್ಗದ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡು ನಿಭಾಯಿಸಲು ನಮ್ಮಿಂದ ಸಾಧ್ಯವಿಲ್ಲ.

ಇತರೆ ಮಕ್ಕಳೊಡನೆ ಅವರು ಅನುಚಿತವಾಗಿ ವರ್ತಿಸಿ ಯಾವುದೇ ಹಾನಿ ಮಾಡುವುದನ್ನು ತಡೆಯುವುದು ಕಷ್ಟ. ಎಲ್ಲವರ್ಗದವರನ್ನು ಸೇರಿಸಿಕೊಳ್ಳಬೇಕೆಂದು ನೀತಿ ಅನುಸರಿಸಿದರೆ ಶಾಲೆ ನಡೆಸುವುದು ಕಷ್ಟ.

ವಿಡಿಯೋ:
ಬೆಂಗಳೂರಿಗೆ ಕಳಂಕ ತಂದ ಬೆಥನಿ ಸ್ಕೂಲ್

ಕ್ರಿಮಿನಲ್ ಪ್ರವೃತ್ತಿಯ ವಿದ್ಯಾರ್ಥಿಗಳು(ಬಡವರ್ಗದವರು ಎಂದು ಓದಿಕೊಳ್ಳಿ) ಸಹಪಾಠಿಗಳ ಮೇಲೆ ದಾಳಿ ಮಾಡಬಹುದು. ಉಪಾಧ್ಯಾಯರಿಗೆ ಎದುರುತ್ತರ ನೀಡಬಹುದು. ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಬಹುದು ನಾವು ಏನು ಮಾಡಲಾಗದು ಎಂದು RTE ಅನ್ನು ಬೆಥನಿ ಶಾಲಾ ಆಡಳಿತ ಮಂಡಳಿ ದೂರಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಕಪಿಲ್ ಸಿಬಲ್ , ಶಾಲೆಯಲ್ಲಿ ನೀತಿ ನಿಯಮ ರೂಪಿಸುವುದು ಹೊಸ ವಿಷಯವಲ್ಲ. ಆದರೆ RTE ಅಳವಡಿಸಲು ಇದು ಸರಿಯಾದ ಕ್ರಮವಲ್ಲ. ಅವರ ಪ್ರಕಾರ ಒಂದನೇ ತರಗತಿಯ ಬಡವರ್ಗದಿಂದ ಬಂದಿರುವ ಹುಡುಗ ಸಿಗರೇಟ್ ಸೇದಲು ಸಾಧ್ಯವೇ. ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X