ಎಸ್ ವೈ ಖುರೇಶಿ ಮುಖ್ಯ ಚುನಾವಣಾ ಆಯುಕ್ತ

SY Quraishi
ನವದೆಹಲಿ, ಜು. 28 : ಕೇಂದ್ರ ಕಾನೂನು ಸಚಿವಾಲಯ ಶಹಾಬುದ್ದೀನ್ ಯಾಕೂಬ್ ಖುರೇಶಿ (ಎಸ್ ವೈ ಖುರೇಶಿ) ಅವರನ್ನು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಿಸಿ ಆದೇಶ ಹೊರಡಿಸಿದೆ. ಸದ್ಯ ಕೇಂದ್ರ ಚುನಾವಣಾ ಮುಖ್ಯ ಚುನಾವಣಾ ಆಯುಕ್ತರಾಗಿರುವ ನವೀನ ಚಾವ್ಲಾ ಅವರು ಗುರುವಾರ ನಿವೃತ್ತಿಯಾಗಲಿದ್ದಾರೆ.

ಎಸ್ ವೈ ಖುರೇಶಿ ಅವರು ಜು.30 ರಿಂದ ಮುಖ್ಯ ಚುನಾವಣಾ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇವರ ಅಧಿಕಾರ ಅವಧಿ ಎರಡು ವರ್ಷಗಳ ಕಾಲ ಇರುತ್ತದೆ. ಬಿಹಾರ, ತಮಿಳುನಾಡು, ಪಶ್ಚಿಮ ಬಂಗಾಲ, ಕೇರಳ ಹಾಗೂ ಆಸ್ಸಾಂನಲ್ಲಿ ಇವರ ನೇತೃತ್ವದಲ್ಲಿ ಚುನಾವಣೆಗಳು ನಡೆಯಲಿವೆ. 63 ವರ್ಷದ ಖುರೇಶಿ 1973 ನೇ ಸಾಲಿನ ಐಎಎಸ್ ಅಧಿಕಾರಿಯಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಕೇಂದ್ರ ಚುನಾವಣಾ ಆಯೋಗದಲ್ಲಿ ನಾವಣಾ ಆಯುಕ್ತರಾಗಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿ ನೇಮಕವಾದ ಮೊದಲ ಮುಸ್ಲಿಂ ಎಂಬ ಗೌರವಕ್ಕೆ ಖುರೇಶಿ ಪಾತ್ರರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+