ಆಟೋರಿಕ್ಷಾ ಕನಿಷ್ಠ ಪ್ರಯಾಣ ದರ ರು.17

ಪರಿಷ್ಕೃತ ದರದಂತೆ ಕನಿಷ್ಠ ಪ್ರಯಾಣ ದರವನ್ನು ರು.14ರಿಂದ 17 ರು.ಗೆ ಏರಿಸಲಾಗಿದೆ ಹಾಗೂ ಪ್ರತಿ ಕಿ.ಮೀ. ದರವನ್ನು 9 ರು.ಗೆ ನಿಗದಿಪಡಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ದರ ಏರಿಕೆ ಹಿಂದೆಂದೂ ಆಗಿರಲಿಲ್ಲ. ಹಾಗಾಗಿ ಬಹುತೇಕ ಆಟೋ ಸಂಘಟನೆಗಳು ಇದಕ್ಕೆ ಒಪ್ಪಿವೆ. ಆಗಸ್ಟ್ 1 ರಿಂದ ನೂತನ ದರ ವ್ಯವಸ್ಥೆ ಜಾರಿಯಾಗಲಿದೆ.
ಡಿಜಿಟಲ್ ಮೀಟರ್ ಕಡ್ಡಾಯ: ಪ್ರಯಾಣಿಕರು ಹಾಗೂ ಆಟೋ ಚಾಲಕರ ಮಧ್ಯೆ ದರಪಟ್ಟಿ ಸಂಬಂಧ ನಡೆಯುವ ಜಗಳ ತಪ್ಪಿಸಲು ಹಾಗೂ ದರ ವಸೂಲಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಡಿಜಿಟಲ್ ಮೀಟರ್ ಅಳವಡಿಕೆ ಕಡ್ಡಾಯ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಅಶೋಕ್ ಹೇಳಿದರು.
ಯಾವುದೇ ಕಾರಣದಿಂದಲೂ ಆಟೋಚಾಲಕರು ಸಂಯಮ ಕಳೆದುಕೊಂಡು ಪ್ರತಿಭಟನೆಗೆ ಇಳಿಯಬಾರದೆಂದು ಮನವಿ ಮಾಡಿದರು. ಸಚಿವರ ಮಾತಿಗೆ ಒಪ್ಪಿಗೆ ಸೂಚಿಸಿದ ಎಂಟಕ್ಕೂ ಹೆಚ್ಚು ಆಟೋ ಸಂಘಟನೆಗಳು ಅಗಸ್ಟ್ 1 ಉದ್ದೇಶಿತ ಬಂದ್ ಆಚರಣೆಯನ್ನು ಕೈ ಬಿಟ್ಟಿವೆ.












Click it and Unblock the Notifications