ಆಲೂಗೆಡ್ಡೆ ಕೆಜಿಗೆ ರು.17, ಈರುಳ್ಳಿ ಕೆಜಿಗೆ ರು.16
ನವದೆಹಲಿ,
ಜು.22: ಕಳೆದ ಜುಲೈ 10 ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ಆಹಾರ ಹಣದುಬ್ಬರ ಶೇ.12.47ಕ್ಕೆ ಅಲ್ಪ ಇಳಿಕೆಯಾಗಿದೆ. ಹಿಂದಿನ ವಾರದಲ್ಲಿ ಹಣದುಬ್ಬರ ಶೇ.12.81ಕ್ಕೇರಿದ್ದು ತರಕಾರಿ, ಈರುಳ್ಳಿ ಹಾಗೂ ಆಲೂಗಡ್ಡೆ ದರದಲ್ಲಿ ಇಳಿಕೆಯಾಗಿರುವುದರಿಂದ ಹಣದುಬ್ಬರ ಇಳಿಕೆಯಾಗಿದೆ. id="toptextpromo">ವಾರ್ಷಿಕ
ಲೆಕ್ಕದಲ್ಲಿ ಆಲೂಗಡ್ಡೆ ಬೆಲೆ ಶೇ.45ರಷ್ಟು ಇಳಿಕೆಯಾಗಿದ್ದು ಈರುಳ್ಳಿ ದರ ಶೇ.8ರಷ್ಟು ಇಳಿಕೆಯಾಗಿದೆ. ತರಕಾರಿ ಬೆಲೆ ಶೇ.9.92ರಷ್ಟು ಇಳಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.23.79 ರಷ್ಟು ಬಾರಿಯಾಗಿದೆ. ವಾರದ ಲೆಕ್ಕದಲ್ಲಿ ಕಾಳುಗಳ ದರ ಶೇ. 0.84ರಷ್ಟು ಇಳಿಕೆಯಾಗಿದೆ. ವಾರ್ಷಿಕ ಲೆಕ್ಕದಲ್ಲಿ ಗೋಧಿ ಬೆಲೆ ಶೇ.5.18 ರಷ್ಟು ಏರಿಕೆಯಾಗಿದೆ. id='are-slot-1' class='oiad oi-axt oiadv'> id='top-searched-articles'>ದೇಶದ
ಹಣದುಬ್ಬರ ಕಳೆದ ಜೂನ್ ನಲ್ಲಿ ಶೇ10.55 ರಷ್ಟು ದಾಖಲಾಗಿದ್ದು, ಕಳೆದ 12 ತಿಂಗಳುಗಳ ಬಹುತೇಕ ಅವಧಿಯಲ್ಲಿ ಆಹಾರ ಹಣದುಬ್ಬರ ಶೇ.16ರಷ್ಟಿತ್ತು. ಬೆಂಗಳೂರಿನ ಹಾಪ್ ಕಾಪ್ಸ್ ದರ ಪಟ್ಟಿಯಂತೆ ಈರುಳ್ಳಿ ಬೆಲೆ ಪ್ರತಿ ಕೆಜಿಗೆ 16 ರು. ಹಾಗೂ ಆಲೂಗೆಡ್ಡೆ ಪ್ರತಿ ಕೆಜಿಗೆ 17 ರು ಆಗಿದೆ.











Click it and Unblock the Notifications