ಕಿಂಗ್ ಫಿಷರ್ ಅಲ್ಟ್ರಾ ಬೀರ್ ಒಮ್ಮೆ ರುಚಿ ನೋಡಿ

650 ಮಿ.ಲೀ ಬೀರ್ ಬಾಟಲಿಗೆ ರು.90 ತಗಲುತ್ತದೆ ಹಾಗೂ 330 ಮಿ.ಲೀ ಬಾಟಲ್ ಗೆ ರು. 50 ಖರ್ಚಾಗುತ್ತದೆ. ಯುವಕರನ್ನು ಗಮನದಲ್ಲಿರಿಸಿಕೊಂಡು ಈ ಹೊಸ ಮಾದರಿಗಳನ್ನು ಪರಿಚಯಿಸುತ್ತಿದ್ದೇವೆ. ಆಕರ್ಷಕ ರೀತಿಯ ಬಾಟಲ್ ಗಳಲ್ಲಿ ಬರುವ ಅಲ್ಟ್ರಾ ಬೀರ್ ಯಶಸ್ಸನ್ನು ಸಂಭ್ರಮವನ್ನು ಹೆಚ್ಚಿಸಲಿದೆ ಎಂದು ಮದ್ಯದ ದೊರೆ ವಿಜಯ್ ಮಲ್ಯ ಹೇಳಿದ್ದಾರೆ.
ದೆಹಲಿಯಲ್ಲಿ ಉತ್ಪನ್ನ ಪರಿಚಯಿಸುತ್ತಿರುವುದರ ಗುಟ್ಟೇನು ಎಂದರೆ, ದೆಹಲಿಯಲ್ಲಿ ಈಗಾಗಲೇ ಉತ್ತಮ ಬೀರ್ ಬ್ರ್ಯಾಂಡ್ ಗಳು ಲಭ್ಯವಿದ್ದು, ಅವುಗಳ ಜೊತೆ ಪೈಪೋಟಿ ನಡೆಸಿ, ಅಲ್ಟ್ರಾ ಬೀರ್ ಮೊದಲ ಪಂಕ್ತಿಯಲ್ಲಿ ನಿಲ್ಲಲಿದೆ. ಬೀರ್ ಮಾರುಕಟ್ಟೆಗೆ ದೆಹಲಿ ಪ್ರಶಸ್ತವಾಗಿದೆ ಎನ್ನುತ್ತಾರೆ ಮಲ್ಯ.
2009 ರಲ್ಲಿ ಮಾರುಕಟ್ಟೆಗೆ ಇಳಿದ ಕಿಂಗ್ ಫಿಷರ್ ಬೀರ್ ಬ್ರ್ಯಾಂಡ್ ಸದ್ಯಕ್ಕೆ ಮುಂಬೈ, ಬೆಂಗಳೂರು, ಪುಣೆ ಹಾಗೂ ಪಾಂಡಿಚೇರಿಯಲ್ಲಿ ಲಭ್ಯವಿದೆ.












Click it and Unblock the Notifications