ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಪರ್ ಬೆಳೆ ಕಾರಣ, ಬಡವರ ಕೈಗೆಟುಕಿದ ಸೇಬು

By Mahesh
|
Google Oneindia Kannada News

Apple gets 40 pc cheper
ನವದೆಹಲಿ, ಜು.22: ದೇಶದಲ್ಲಿ ಈ ವರ್ಷ ಸೇಬು ಬಂಪರ್ ಬೆಳೆಯಾಗಿರುವುದರಿಂದ ಶ್ರೀ ಮಂತರ ಹಣ್ಣಾದ ಸೇಬಿನ ಬೆಲೆ ಸಗಟು ಹಾಗೂ ಚಿಲ್ಲರೆ ಮಾರಾಟದಲ್ಲಿ ಶೇ 40 ರಷ್ಟು ಇಳಿಕೆಯಾಗಿದೆ. ದುಬಾರಿ ಹಣ್ಣು ಈಗ ಬಡವರ ಕೈ ಎಟುಕುವಂತಾಗಿದೆ.

ಹಿಮಾಚಲ ಪ್ರದೇಶದಲ್ಲಿ 20 ಕೆಜಿ ಸೇಬಿನ ಪೆಟ್ಟಿಗೆಯ ಸಗಟು ಬೆಲೆ 1000 ದಿಂದ 1100 ರೂಪಾಯಿಗಳಿಗೆ ಕುಸಿದಿದೆ. ಕಳೆದ ವರ್ಷ ಇದು 1600 ರಿಂದ 1700 ರೂಪಾಯಿಗಳಷ್ಟಿತ್ತು. ಜಮ್ಮು ಕಾಶ್ಮೀರದಲ್ಲೂ ಇದೇ ರೀತಿ ಬೆಲೆ ಇಳಿಕೆಯಾಗಿದೆ.

ಇದರಿಂದ ಮಹಾನಗರಗಳಾದ ಚೆನ್ನೈ, ದೆಹಲಿ, ಮುಂಬೈನಲ್ಲೂ ಬೆಲೆ ಪ್ರತೀ ಕೆಜಿಗೆ ರೂ 60 ರಿಂದ 70ಕ್ಕೆ ಇಳಿದಿದ್ದು ಕಳೆದ ವರ್ಷ 100 ರಿಂದ 110 ರುಪಾಯಿಗಳಿಗೆ ಮಾರಾಟವಾಗಿತ್ತು. ಹಿಮಾಚಲ ಪ್ರದೇಶದ ತೋಟಗಾರಿಕಾ ಇಲಾಖೆಯ ಅಂದಾಜಿನ ಪ್ರಕಾರ ಈ ಜುಲೈ- ಅಕ್ಟೋಬರ್ ಸೀಸನ್ ನಲ್ಲಿ ಸೇಬಿನ ಉತ್ಪಾದನೆ ಎರಡೂ ವರೆ ಪಟ್ಟು ಹೆಚ್ಚಳವಾಗಲಿದ್ದು 6,35,000 ಟನ್ ಗಳಾಗಲಿವೆ.

ಕಳೆದ ವರ್ಷ ಇಲ್ಲಿ 2,80,000 ಟನ್ ಸೇಬು ಉತ್ಪಾದನೆ ಆಗಿತ್ತು. ಕಳೆದ ವರ್ಷ ಜಮ್ಮು ಕಾಶ್ಮೀರದಲ್ಲಿ 7 ಲಕ್ಷ ಟನ್ ಸೇಬು ಉತ್ಪಾದನೆ ಆಗಿದ್ದರೆ ಈ ವರ್ಷ 11,20,000 ಟನ್ ಉತ್ಪಾದನೆ ಆಗಲಿದೆ.ಸೇಬು ಬೆಳೆಯುವ ಎರಡೂ ರಾಜ್ಯಗಳಲ್ಲಿ ಉತ್ತಮ ಮಳೆ ಆಗಿದ್ದು ಹಾಗೂ ಹಿಮ ಕಡಿಮೆಯಾಗಿರುವುದರಿಂದ ಬೆಳೆ ಬಂಪರ್ ಆಗಿದೆ.

ಬೆಲೆ ಇಳಿಕೆಯಾಗಿರುವುದರಿಂದ ಶೀಥಲೀಕರಣ ಕೇಂದ್ರಗಳಲ್ಲಿ ದಾಸ್ತಾನು ಹೆಚ್ಚಾಗಿದೆ. ಕಳೆದ ವರ್ಷ ಪ್ರಮುಖ ಕೃಷಿ ಉತ್ಪನ್ನ ಮಾರಾಟ ಕಂಪೆನಿ ಅದನಿ ಆಗ್ರಿ ಫ್ರೆಶ್ 18,000ಟನ್ ಸೇಬನ್ನು ದಾಸ್ತಾನು ಮಾಡಿದ್ದು ಈ ವರ್ಷ 35,000 ಟನ್ ಹಣ್ಣನ್ನು ದಾಸ್ತಾನು ಮಾಡಲಿದೆ ಎಂದು ಕಂಪೆನಿಯ ಉಪ ಪ್ರಧಾನ ವ್ಯವಸ್ಥಾಪಕ ಸಂಜಯ್ ಮಹಾಜನ್ ಹೇಳುತ್ತಾರೆ.

ಏಷ್ಯಾದ ಅತೀ ದೊಡ್ಡ ಹಣ್ಣಿನ ಮಾರುಕಟ್ಟೆಯಾದ ಆಝಾದ್ ಪುರಕ್ಕೆ ನಿತ್ಯ ಸರಬರಾಜಾಗುತ್ತಿರುವ ಸೇಬಿನ ಪರಿಮಾನದಲ್ಲಿ ಹೆಚ್ಚಳ ಆಗುತ್ತಿದೆ. ಜಮ್ಮು ಕಾಶ್ಮೀರದಿಂದ ಕಳೆದ ವರ್ಷ ತಲಾ 14 ಕೆ.ಜಿಯ 5 ಕೋಟಿ ಪೆಟ್ಟಿಗೆ ಹಣ್ಣುಗಳು ಬಂದಿದ್ದರೆ ಈ ವರ್ಷ 8 ಕೋಟಿ ಪೆಟ್ಟಿಗೆ ಹಣ್ಣುಗಳು ಬರಲಿವೆ ಎಂದು ಇಲ್ಲಿನ ವರ್ತಕ ಸಂಘ ಹೇಳಿದೆ.

ಜುಲೈ 20ರವರೆಗೆ ಆಝಾದ್ ಪುರ ಮಾರುಕಟ್ಟೆಗೆ ಶಿಮ್ಲಾ ದಿಂದ 20,427 ಟನ್ ಹಾಗೂ ಜಮ್ಮು ಕಾಶ್ಮೀರದಿಂದ 3847 ಟನ್ ಸೇಬು ಬಂದಿದೆ ಎಂದು ದೆಹಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಂಕಿ ಅಂಶ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X