ಏಯ್ ಮಂಗ್ಯಾ ಗುಂಡು ಹಾರಿಸಬ್ಯಾಡಲೇ!
ನ್ಯೂಯಾರ್ಕ್,
ಜು. 15 : ಜಿಹಾದ್ ಗಾಗಿ ಹದಿಹರೆಯದ ಯುವಕರಿಗೆ ಭಯೋತ್ಪಾದನಾ ತರಬೇತಿ ನೀಡುತ್ತಿದ್ದ ತಾಲಿಬಾನ್ ಉಗ್ರರು ಇದೀಗ ಮಂಗಗಳಿಗೂ (ಕೋತಿ) ಭಯೋತ್ಪಾದನೆ ತರಬೇತಿ ನೀಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಕೋತಿಗಳಿಗೂ ಗುಂಡು ಹಾರಿಸುವ ತರಬೇತಿಯನ್ನು ತಾಲಿಬಾನ್ ಉಗ್ರರು ನೀಡುತ್ತಿದ್ದಾರೆ ಎಂದು ಚೀನಾ ಮಾಧ್ಯಮಗಳಲ್ಲಿ ವರದಿಯಾಗಿದೆ. id="toptextpromo">ಚೀನಾ
ಪೀಪಲ್ಸ್ ಡೈಲಿ ಪತ್ರಿಕೆ ಈ ವರದಿ ಮಾಡಿದ್ದು, ತಾಲಿಬಾನ್ ಉಗ್ರರನ್ನು ನಾಶಗೊಳಿಸಲು ಅಪಘಾನಿಸ್ತಾನದಲ್ಲಿರುವ ತಾಲಿಬಾನ್ ಹಿಡಿತವಿರುವ ವಾಜರಿಸ್ತಾನ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿರುವ ಅಮೆರಿಕದ ಸೇನೆಯ ಮೇಲೆ ದಾಳಿ ನಡೆಸಲು ಕೋತಿಗಳಿಗೆ ತರಬೇತಿ ನೀಡುತ್ತಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕೋತಿಗಳಿಗೆ
ಗುಂಡು ಹಾರಿಸುವುದು, ಎಕೆ 47, ಮಷೀನ್ ಗನ್, ಮಾರ್ಟರ್ ಗಳ ಬಳಕೆಯನ್ನು ಕೋತಿಗಳಿಗೆ ನೀಡುತ್ತಿದ್ದಾರೆ. ಮಾನವ ಬಾಂಬ್ ಗಳ ಬದಲಿಗೆ ಕೋತಿಗಳ ಬಾಂಬ್ ನಡೆಸಿದರೂ ಅಚ್ಚರಿಯಿಲ್ಲ ಎಂದು ಪತ್ರಿಕೆ ವರದಿ ಮಾಡಿದೆ. ಕೋತಿಗಳಲ್ಲಿ ಕೂಡಾ ಶಾರ್ಪ್ ಶೂಟರ್ ಕೋತಿಗಳೂ ಇವೆ ಎಂದು ವರದಿಯಾಗಿದೆ.











Click it and Unblock the Notifications