ಹಂಪಿ ಎಕ್ಸ್ ಪ್ರೆಸ್ ರೈಲಿನ ಸಮಯ ಬದಲಾವಣೆ
ಹುಬ್ಬಳ್ಳಿ,
ಜು. 15 : ಹುಬ್ಬಳ್ಳಿ-ಬೆಂಗಳೂರು-ಹುಬ್ಬಳ್ಳಿ ಹಂಪಿ ಎಕ್ಸ್ ಪ್ರೆಸ್ (ಟ್ರೇನ್ ನಂಬರ್-6591/6592) ರೈಲು ಹಾಗೂ ನಾಂದೇಡ-ಬೆಂಗಳೂರು- ನಾಂದೇಡ ಏಕ್ಸ್ ಪ್ರೆಸ್ (6593/6594) ರೈಲುಗಳ ಲಿಂಕ್ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ. ಈ ರೈಲುಗಳು ಜುಲೈ 22 ರಿಂದ ನೇರವಾಗಿ ಸಂಚರಿಸಲಿವೆ. id="toptextpromo">ಈ
ರೈಲುಗಳ ಲಿಂಕ್ ಸಂಚಾರ ರದ್ದುಗೊಳಿಸಿರುವ ನೈಋತ್ಯ ರೈಲ್ವೆ ವಲಯ, ಬೆಂಗಳೂರು-ಹುಬ್ಬಳ್ಳಿ-ಬೆಂಗಳೂರು ಹಾಗೂ ಬೆಂಗಳೂರು-ನಾಂದೇಡ ಮಧ್ಯೆ ನೇರವಾಗಿ ರೈಲು ಸಂಚರಿಸಲಿವೆ ಎಂದು ತಿಳಿಸಿದೆ. ಹಂಪಿ ಎಕ್ಸ್ ಪ್ರೆಸ್ ರೈಲು ಜುಲೈ 22 ರಿಂದ ಸಂಜೆ 5.30ಕ್ಕೆ ಹುಬ್ಬಳ್ಳಿ ನಿಲ್ದಾಣದಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 6.10ಕ್ಕೆ ಬೆಂಗಳೂರು ನಿಲ್ದಾಣ ತಲುಪುತ್ತದೆ. ಅದೇ ರೀತಿ ಬೆಂಗಳೂರು ನಿಲ್ದಾಣದಿಂದ ರಾತ್ರಿ 9ಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 10.10ಕ್ಕೆ ಹುಬ್ಬಳ್ಳಿ ತಲುಪಲಿದೆ. id='are-slot-1' class='oiad oi-axt oiadv'> id='top-searched-articles'>ನಾಂದೇಡ
ಎಕ್ಸ್ ಪ್ರೆಸ್ ರೈಲು ನಾಂದೇಡ ರೈಲು ನಿಲ್ದಾಣದಿಂದ ಸಂಜೆ 6ಕ್ಕೆ ಹೊರಟು ಮರುದಿನ ಬೆಳಗ್ಗೆ 6.10ಕ್ಕೆ ಬೆಂಗಳೂರು ನಿಲ್ದಾಣ ಬಂದು ತಲುಪಲಿದೆ. ಬೆಂಗಳೂರು ರೈಲು ನಿಲ್ದಾಣದಿಂದ ರಾತ್ರಿ 11ಕ್ಕೆ ಹೊರಟು ಮರುದಿನ ಬೆಳಗ್ಗೆ 9.55ಕ್ಕೆ ನಾಂದೇಡಕ್ಕೆ ಬಂದು ಸೇರುತ್ತದೆ.











Click it and Unblock the Notifications