ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಜನಾ ಸಾವು, ಮುನಿ ದೋಷಿ:ಲೋಕಾಯುಕ್ತ

By Mahesh
|
Google Oneindia Kannada News

Sanjana Singh
ಬೆಂಗಳೂರು, ಜು.13: ಗೋಡೆ ಕುಸಿತದಿಂದ ಸಾವನ್ನಪ್ಪಿದ ವಿದ್ಯಾರ್ಥಿನಿ ಸಂಜನಾ ಸಿಂಗ್ ಸಾವಿಗೆ ಕಳಪೆ ಕಾಮಗಾರಿಯೇ ನೇರ ಕಾರಣ ಎಂದು ಕಾರ್ಪೋರೇಟರ್ ಕಮ್ ಕಂಟ್ರಾಕ್ಟರ್ ಮುನಿರತ್ನ ಮೇಲೆ ಆರೋಪ ಹೊರೆಸಿ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ತಂಡ ತನಿಖೆ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದೆ.

ಸಂಜನಾ ಸಿಂಗ್ ಹೆತ್ತವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ತನಿಖೆ ನಡೆಸಿತ್ತು. ಅದರ ಆಧಾರದ ಮೇಲೆ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ವರದಿ ತಯಾರಿಸಿದ್ದು, ಬಿಬಿಎಂಪಿ ಮೇಯರ್ ಹಾಗೂ ಸರಕಾರಕ್ಕೆ ವರದಿ ಪ್ರತಿ ಸಲ್ಲಿಸಿದ್ದಾರೆ.

'ಬಿಬಿಎಂಪಿ ಸದಸ್ಯ ಮುನಿರತ್ನ, ಗುತ್ತಿಗೆದಾರ ಹ್ಯೂಮೇಶ್ ಹಾಗೂ ಬಿಬಿಎಂಪಿಯ ನಾಲ್ವರು ಇಂಜಿನಿಯರ್‌ಗಳ ವಿರುದ್ಧ ಶಿಸ್ತು ಕ್ರಮ ಹಾಗೂ ಕ್ರಿಮಿನಲ್ ಆಕ್ಷನ್ ತೆಗೆದುಕೊಳ್ಳುವಂತೆ ವರದಿಯಲ್ಲಿ ಸೂಚಿಸಲಾಗಿದೆ.

ಸಂಜನಾ ಸಿಂಗ್ ಸಾವಿಗೆ ಕಳಪೆ ಕಾಮಗಾರಿಯೇ ಕಾರಣ. ಜನರು ಓಡಾಡುವ ಜಾಗದಲ್ಲೇ ಗೋಡೆ ನಿರ್ಮಿಸಿದ್ದಕ್ಕೆ ಅಧಿಕಾರಿಗಳ ಹಾಗೂ ಪಾಲಿಕೆಯ ನಿರ್ಲಕ್ಷ್ಯವೇ ಕಾರಣ. ಐಪಿಸಿ ಸೆಕ್ಷನ್ 304 ಎ ಪ್ರಕಾರ ಇವರ ವಿರುದ್ಧ ನಿರ್ಲಕ್ಷ್ಯ ಪ್ರಕರಣ
ದಾಖಲಿಸಿಕೊಂಡು ಕ್ರಮ ತೆಗೆದುಕೊಳ್ಳುವಂತೆ ಶಿಫಾರಸು ಮಾಡಲಾಗಿದೆ.

ಹಿನ್ನೆಲೆ: ಜೂನ್ 1ರಂದು ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದ ಹೆಬ್ಬಾಳದ ಪಶು ವೈದ್ಯ ಮಹಾ ವಿದ್ಯಾಲಯದ ತಡೆಗೋಡೆ ಕುಸಿದು ಕೇಂದ್ರೀಯ ವಿದ್ಯಾಲಯದ ಪಿಯುಸಿ ವಿದ್ಯಾರ್ಥಿನಿ ಸಂಜನಾ ಸಿಂಗ್ (17) ಮೃತಪಟ್ಟಿದ್ದರು.

ಗೋಡೆ ಕುಸಿಯಲು ಕಳಪೆ ಕಾಮಗಾರಿಯೇ ಕಾರಣ ಎಂದು ಸಂಜನಾ ಸಿಂಗ್ ಪೋಷಕರು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಗುತ್ತಿಗೆದಾರ ಹಾಗೂ ಬಿಬಿಎಂಪಿ ಸದಸ್ಯ ಮುನಿರತ್ನ, ಕಳಪೆ ಕಾಮಗಾರಿಯಿಂದ ಈ ಘಟನೆ ಸಂಭವಿಸಿದ್ದರೆ ಸಂಜನಾ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡುವುದಾಗಿ ಹೇಳಿಕೆ ನೀಡಿ ಉದ್ದಟತನ ಪ್ರದರ್ಶಿಸಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X