Get Updates
Get notified of breaking news, exclusive insights, and must-see stories!

ಸ್ಪೇನ್ ಕಡೆಗೆ ಹರಿದಿದೆ ಭರ್ಜರಿ ಹಣದ ಹೊಳೆ

Spain to get big bonus from FA, Spain
ಜೋಹಾನ್ಸ್ ಬರ್ಗ್, ಜು.12 : 19 ನೇ ವಿಶ್ವಕಪ್ ಗೆದ್ದ ಸ್ಪೇನ್ ತಂಡಕ್ಕೆ ಭಾರಿ ಮೊತ್ತದ ಬಹುಮಾನ ಲಭಿಸಿದೆ. ಕಳೆದ ಬಾರಿಗಿಂತ ಈ ಸಲ ದಾಖಲೆಯ ಮೊತ್ತದ ಬಹುಮಾನವನ್ನು ಫೀಫಾ ನೀಡಿದೆ. 2006 ವಿಶ್ವಕಪ್ ನ ಬಹುಮಾನ ಮೊತ್ತಕ್ಕೆ ಹೋಲಿಸಿದರೆ ಈ ಬಾರಿ ಶೇ.61 ರಷ್ಟು ಹೆಚ್ಚಳವನ್ನು ಕಾಣಬಹುದು.

ವಿಶ್ವ ಚಾಂಪಿಯನ್ ಆದ ಸ್ಪೇನ್ ತಂಡಕ್ಕೆ 139 ಕೋಟಿ ಲಭಿಸಿದೆ. ರನ್ನರ್ ಅಪ್ ಹಾಲೆಂಡ್ ತಂಡ 112ಕೋಟಿ ರು ಗಳಿಸಿದೆ. ಉಳಿದಂತೆ ಮೂರನೇ ಸ್ಥಾನ ಪಡೆದ ಜರ್ಮನಿಗೆ 93 ಕೋಟಿ ರು ಸಿಕ್ಕಿದೆ.

ಸ್ಪೇನ್ ಗೂಳಿ ದಾಳಿಗೆ ನುಜ್ಜುಗುಜ್ಜಾದ ಆರೆಂಜ್
ಫೀಫಾ ವಿಶ್ವಕಪ್ ನ ಚಿನ್ನದಂಥ ಆಟಗಾರರು

ನಾಲ್ಕನೇ ಸ್ಥಾನ ಪಡೆದ ಉರುಗ್ವೆ ತಂಡಕ್ಕೆ 83ಕೋಟಿ, ಕ್ವಾಟರ್ ಫೈನಲ್ಸ್ ನಲ್ಲಿ ನಿರ್ಗಮಿಸಿದ 4 ತಂಡಗಳಿಗೆ ತಲಾ 65 ಕೋಟಿ ರು ಹಾಗೂ ಪ್ರಿ ಕ್ವಾಟರ್ ಫೈನಲ್ ನಿಂದ ಹೊರ ಬಿದ್ದ 8 ತಂಡಗಳಿಗೆ ತಲಾ 41 ಕೋಟಿ ರು ಲಭಿಸಿದೆ.

ಉಳಿದಂತೆ, 16ರಹಂತ ತಲುಪುವಲ್ಲಿ ವಿಫಲವಾದ 16 ತಂಡಗಳಿಗೆ ತಲಾ 37 ಕೋಟಿ ರು ಲಭಿಸಲಿದೆ. ಒಟ್ಟಾರೆ ಈ ಟೂರ್ನಿಯಲ್ಲಿ ಬಹುಮಾನಗಳ ಮೊತ್ತವೇ 1960 ಕೋಟಿ ರು ದಾಟಿದೆ.

ಸ್ಪೇನ್ ಆಟಗಾರರು ಫೈನಲ್ ತಲುಪುವ ವೇಳೆಗೆ ಸುಮಾರು 130,000 ಡಾಲರ್ ಹಣ ಜೋಳಿಗೆಯಲ್ಲಿ ತುಂಬಿಸಿಕೊಂಡಿದ್ದರು ಎಂಬ ಸುದ್ದಿಯಿದೆ. ಸ್ಪಾನೀಷ್ ಫುಟ್ಬಾಲ್ ಅಸೋಷಿಯೇಷನ್ ಕೂಡಾ ಸ್ಪೇನ್ ತಂಡದ23 ಆಟಗಾರರಿಗೆ 600,000 ಯುರೋಸ್(ಸುಮಾರು 758,000ಯುಎಸ್ ಡಾಲರ್) ಬೋನಸ್ ನೀಡಲು ನಿರ್ಧರಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+