ಆಕ್ಟೋಪಸ್ ಅಂತಿಮ ನಿರ್ಣಯ: ಸ್ಪೇನ್ ಗೆ ವಿಶ್ವಕಪ್

Paul the octopus bets for Spain in World Cup final
ಒಬೆರ್ಸೆನ್, ಜು.9: ಫೀಫಾ ವಿಶ್ವಕಪ್ 2010 ನಲ್ಲಿ ಎಂಟು ಕಾಲುಗಳ ಜೀವಿ ಪೌಲ್ ಸೂಚಿಸಿದ ಭವಿಷ್ಯ ನೂರರಷ್ಟು ನೂರರಷ್ಟು ನಿಜವಾಗಿದ್ದು, ಇದೇ ಪ್ರಪ್ರಥಮ ಬಾರಿಗೆ ಜರ್ಮನ್ ತಂಡವಿಲ್ಲದ ಪಂದ್ಯವಾಳಿಯ ಹಣೆಬರಹವನ್ನು ಸೂಚಿಸಿದೆ. ಅಂತಿಮ ಹಣಾಹಣಿಯಲ್ಲಿ ಹಾಲೆಂಡ್ ಅನ್ನು ಮಣಿಸಿ ಸ್ಪೇನ್ ಕಪ್ ಎತ್ತಲಿದೆ ಎಂದು ಆಕ್ಟೋಪಸ್ ಸೂಚಿಸಿದೆ.

ಎರಡು ವರ್ಷದ ಈ ಪುಟ್ಟ ಅಷ್ಟಪಾದಿಯ ಭವಿಷ್ಯ ನಂಬುವುದೋ ಬಿಡುವುದು ಅದು ಅಭಿಮಾನಿಗಳಿಗೆ ಬಿಟ್ಟಿದ್ದು, ಆದರೆ, ಆಕ್ಟೋಪಸ್ ಭವಿಷ್ಯ ಕೇಳಿ ಬುಕ್ಕಿಗಳಂತೂ ಕುಣಿದಾಡುತ್ತಿದ್ದಾರಂತೆ, ವಿಶ್ವಕಪ್ ಆರಂಭದಿಂದಲೂ ಸ್ಪೇನ್ ಪರ ನಿಂತಿದ್ದ ಬುಕ್ಕಿಗಳಿಗೆ ಆಕ್ಟೋಪಸ್ ಭವಿಷ್ಯ ಪೂರಕವಾಗಿರುವುದು ಬೆಟ್ಟಿಂಗ್ ದಂಧೆಗೆ ಭಾರಿ ಅನುಕೂಲವಾಗಿದೆ.

ಸೆಮಿಫೈನಲ್ಸ್ ನಲ್ಲಿ ಸ್ಪೇನ್ ವಿರುದ್ಧ ಜರ್ಮನಿ ಸೋಲುವುದು ಎಂದು ಸೂಚಿಸಿದ್ದ ಪೌಲ್ ವಿರುದ್ಧ ಜರ್ಮನ್ ಅಭಿಮಾನಿಗಳು ಕೆಂಡ ಕಾರಿದ್ದರು. ಕೆಲವರು ಪೌಲ್ ಅನ್ನು ಕೊಚ್ಚಿ ತಿಂದು ಹಾಕಲು ಸಿದ್ಧರಾಗಿದ್ದರು. ಆದರೆ ಮೂರನೇ ಹಾಗೂ ನಾಲ್ಕನೇ ಸ್ಥಾನಕ್ಕೆ ನಡೆಯುವ ಜರ್ಮನ್ ಹಾಗೂ ಉರುಗ್ವೆ ಹಣಾಹಣಿಯಲ್ಲಿ ಜರ್ಮನಿ ಗೆದ್ದು ಮೂರನೇಸ್ಥಾನ ಪಡೆಯಲಿದೆ ಎಂದು ಆಕ್ಟೋಪಸ್ ಸೂಚಿಸಿದೆ.

ಜರ್ಮನಿ ಆಡಿದ ಎಲ್ಲಾ ಪಂದ್ಯಗಳಿಗೆ ಸರಿಯಾದ ಫಲಿತಾಂಶ ಸೂಚಿಸಿದ್ದ ಪೌಲ್, ಸೆರ್ಬಿಯಾ,ಸ್ಪೇನ್ ವಿರುದ್ಧ ಸೋಲು, ಇಂಗ್ಲೆಂಡ್ ವಿರುದ್ಧ ಗೆಲುವು ಎಲ್ಲವನ್ನೂ ಒಂದೇ ವಿಧಾನದಲ್ಲಿ ಸೂಚಿಸಿತ್ತು. 2008 ರ ಯುರೋಪಿಯನ್ ಚಾಂಪಿಯನ್ ಶಿಪ್ ಫೈನಲ್ಸ್ ನಲ್ಲಿ ಜರ್ಮನಿ ಗೆಲುವನ್ನು ಸೂಚಿಸಿದ್ದು ಮಾತ್ರ ಕೈಕೊಟ್ಟಿತ್ತು. ಆ ಪಂದ್ಯವನ್ನು ಸ್ಪೇನ್ 1-0 ಅಂತರದಿಂದ ಗೆದ್ದಿತ್ತು.

ವಿಶ್ವಕಪ್ ಯಾರೂ ಗೆದ್ದರೆ ತನಗೇನೂ ಎಂಬಂತೆ ತನ್ನ ಪಾಲಕ ಆಹಾರ ನೀಡಿದಾಗ ಮಾತ್ರ ಸೇವಿಸುತ್ತಾ, ತನ್ನಷ್ಟಕ್ಕೆ ತಾನು ಪಶ್ಚಿಮ ಜರ್ಮನಿಯ ಸೀ ಲೈಫ್ ಅಕ್ವೇರಿಯಂನಲ್ಲಿ ಈಜಾಡುತ್ತಿರುವ ಪೌಲ್ ಮೇಲೆ ಇಡೀ ಜಗದ ಕಣ್ಣು ಬಿದ್ದಿರುವುದಂತೂ ನಿಜ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+