ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಲೆಂಡ್ ಗೆ ವಿಶ್ವಕಪ್, ಇದು ಗಿಣಿಶಾಸ್ತ್ರ!

By Prasad
|
Google Oneindia Kannada News

Parrot predicts Holland will lift FIFA world cup
ಸಿಂಗಾಪುರ, ಜು. 9 : ಫೀಫಾ ವಿಶ್ವಕಪ್ ಫಲಿತಾಂಶದ ಬಗ್ಗೆ ಅಕ್ಟೋಪಸ್ ಭವಿಷ್ಯ ನಿಜವಾಗುತ್ತಿದ್ದಂತೆ ಇನ್ನೊಂದು ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ಸಿಂಗಾಪುರದ ಫುಟ್ ಬಾಲ್ ಅಭಿಮಾನಿಗಳು ವಿಶ್ವಕಪ್ ನ ಫಲಿತಾಂಶದ ಭವಿಷ್ಯ ಅರಿಯಲು ಗಿಳಿಯೊಂದನ್ನು ನಂಬಿದ್ದಾರೆ. "ಮಣಿ" ಹೆಸರಿನ ಈ ಗಿಳಿ ಕರಾರುವಕ್ಕಾಗಿ ಭವಿಷ್ಯ ನುಡಿಯುತ್ತಿದ್ದು ಸಿಂಗಾಪುರದ ತುಂಬಾ ಇದರದ್ದೇ ಮಾತು.

ಮಲೇಷ್ಯಾದ ಏಳು ವರ್ಷದ ಈ ಗಿಳಿ ಈಗ ಎಲ್ಲರ ಮನೆಮಾತಾಗಿದೆ. ಹಾಲೆಂಡ್, ಉರಗ್ವೆ, ಸ್ಪೇನ್ ಮತ್ತು ಜರ್ಮನಿ ತಂಡಗಳು ಉಪಾಂತ್ಯ ಪ್ರವೇಶಿಸುತ್ತವೆ ಮತ್ತು ಸ್ಪೇನ್ ಜರ್ಮನಿಯನ್ನು ಸೋಲಿಸಿ ಫೈನಲ್ ತಲುಪುತ್ತದೆ ಎಂದು ಭವಿಷ್ಯ ನುಡಿದಿತ್ತಂತೆ. ಹಾಲೆಂಡ್ ತಂಡ ಸ್ಪೇನ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದು ಕೊಳ್ಳಲಿದೆ ಎಂದು ಗಿಳಿ ಭವಿಷ್ಯ ನುಡಿದಿದೆ. ಈ ಭವಿಷ್ಯ ಕೂಡ ನಿಜವಾಗುತ್ತದೆ ಎಂದು ಗಿಳಿಯ ಮಾಲೀಕ ಮುನಿಯಪ್ಪನ್ ಆಶಾವಾದ ಹೊಂದಿದ್ದಾರೆ.

ಫುಟ್ ಬಾಲ್ ಅಲ್ಲದೆ ಸಾರ್ವಜನಿಕರ ಭವಿಷ್ಯವನ್ನು ಕೂಡ ಈ ಗಿಳಿ ನುಡಿಯುತ್ತದೆ. ಮದುವೆ, ಕೆಲಸ, ವೈವಾಹಿಕ ಜೀವನದ ಬಗ್ಗೆ ಕೂಡ ಭವಿಷ್ಯ ನುಡಿಯುತ್ತದೆ. ಈ ಗಿಳಿ ತನ್ನ ಮಾಲೀಕನೊಂದಿಗೆ ಸಿಂಗಾಪುರದ ತಮಿಳಿಗರು ಅಧಿಕ ಸಂಖ್ಯೆಯಲ್ಲಿರುವ 'ಲಿಟಲ್ ಇಂಡಿಯಾ' ಜಿಲ್ಲೆಯಲ್ಲಿ ವಾಸವಾಗಿದೆ.

ಗಿಣಿಶಾಸ್ತ್ರ ಸುಳ್ಳಾದರೆ? : ತಮ್ಮ ದೇಶದ ವಿರುದ್ಧ ಜ್ಯೋತಿಷ್ಯ ನುಡಿದಿದ್ದಕ್ಕಾಗಿ ಅಕ್ಟೋಪಸ್ ವಿರುದ್ಧ ಜರ್ಮನ್ನರು ಕೆಂಡ ಕಾರುತ್ತಿದ್ದಾರೆ. ಅದನ್ನು ತಿಂದು ತೀರ್ಥ ಕುಡಿಯಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ರೀತಿ, ಮಾತಾಡುವ ಸಿಂಗಪುರದ ಗಿಣಿ ಜ್ಯೋತಿಷ್ಯ ಸುಳ್ಳಾದರೆ? ಅದು ಯಾರ ಕೈಗೂ ಸಿಗದೆ ಹಾರಿ ಹೋಗಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X