ಕೊಡಗಿನಲ್ಲಿ ಜಲಲ ಜಲ ಜಲಧಾರೆಗಳ ಥಕಥೈ

ಕೊಡಗಿಗೊಂದು ಸುತ್ತು ಹೊಡೆದರೆ ಇಲ್ಲಿನ ಕಾಫಿ, ಏಲಕ್ಕಿ ತೋಟಗಳ ನಡುವೆ, ಗದ್ದೆ ಬಯಲುಗಳ ಅಂಚಿನಲ್ಲಿ, ಬೆಟ್ಟ, ಗುಡ್ಡಗಳ ಕಣಿವೆಗಳಲ್ಲಿ ಅಸಂಖ್ಯಾತ ಜಲಧಾರೆಗಳು ಕಂಡು ಬರುತ್ತವೆ. ಇವುಗಳಲ್ಲಿ ಕೆಲವು ಜಲಧಾರೆಗಳು ಅಲ್ಪಾಯುಷಿಗಳು. ಮಳೆಗಾಲದಲ್ಲಿ ಮಾತ್ರ ಮೈದುಂಬಿ ಧುಮಕುತ್ತಾ ಚೆಲುವು ಪ್ರದರ್ಶಿಸುತ್ತವೆ. ಮಳೆ ಕಡಿಮೆಯಾಗುತ್ತಿದ್ದಂತೆಯೇ ಸೊರಗಿ ಹೋಗುತ್ತವೆ. ಇವುಗಳ ಚೆಲುವು ನೋಡಬೇಕಾದರೆ ಮತ್ತೆ ಮಳೆಗಾಲ ಬರಬೇಕು.
ಇಲ್ಲಿರುವ ಜಲಧಾರೆಗಳ ಪೈಕಿ ಕೆಲವು ಮೈದುಂಬಿ ವರ್ಷ ಪೂರ್ತಿ ಭೋರ್ಗರೆದು ಧುಮುಕುತ್ತಾ ಪ್ರವಾಸಿಗರನ್ನು ಸದಾ ಸೆಳೆಯುತ್ತಿರುತ್ತವೆ. ಅವುಗಳೆಂದರೆ ಮಡಿಕೇರಿ ಬಳಿಯ ಅಬ್ಬಿಫಾಲ್ಸ್, ದಕ್ಷಿಣ ಕೊಡಗಿನ ಇರ್ಪುಫಾಲ್ಸ್, ಸೋಮವಾರಪೇಟೆಯ ಮಲ್ಲಳ್ಳಿ ಫಾಲ್ಸ್, ನಾಪೋಕ್ಲು ಬಳಿಯ ನೀಲಕಂಡಿ, ಚೆಯ್ಯಂಡಾಣೆ ಬಳಿಯ ಚೇಲಾವರಫಾಲ್ಸ್, ಸಂಪಾಜೆಯ ಕಲ್ಯಾಳಫಾಲ್ಸ್ ಹೀಗೆ ಹತ್ತಾರು ಜಲಧಾರೆಗಳು ಗಮನಸೆಳೆಯುತ್ತವೆ.
ಈ ಜಲಧಾರೆಗಳಲ್ಲಿ ಕೆಲವೊಂದಕ್ಕೆ ಮಾತ್ರ ರಸ್ತೆ ಸಂಪರ್ಕವಿದ್ದು, ವಾಹನಗಳಲ್ಲಿ ತೆರಳಬಹುದಾಗಿದೆ. ಉಳಿದ ಜಲಧಾರೆಗಳನ್ನು ವೀಕ್ಷಿಸಬೇಕಾದರೆ, ಕಲ್ಲು, ಮುಳ್ಳುಗಳನ್ನು ಮೆಟ್ಟಿ ನಡೆಯಬೇಕು, ಬೆಟ್ಟಗುಡ್ಡಗಳನ್ನು ಹತ್ತಿ ಇಳಿಯಬೇಕು. ಇದಕ್ಕೆ ತಯಾರಿದ್ದರೆ ಮಾತ್ರ ಜಲಧಾರೆಗಳ ಚೆಲುವನ್ನು ಹತ್ತಿರದಿಂದ ವೀಕ್ಷಿಸಲು ಸಾಧ್ಯ.












Click it and Unblock the Notifications