ಭವಿಷ್ಯ ನುಡಿದ ಅಕ್ಟೋಪಸ್ ಭವಿಷ್ಯವೇ ಅತಂತ್ರ

ಜರ್ಮನಿಯ ಎಲ್ಲಾ ಪಂದ್ಯಗಳ ಭವಿಷ್ಯ ಕರಾರುವಾಕ್ಕಾಗಿ ಹೇಳಿರುವ ಪೌಲ್ ಬಗ್ಗೆ ಈವರೆಗೂ ಹೆಮ್ಮೆ ಪಡುತ್ತಿದ್ದ ಜರ್ಮನ್ನರು, "ಇಂಗ್ಲೆಂಡ್ ನಿಂದ ಈ ಅನಿಷ್ಟವನ್ನು ಕರೆತಂದಿದ್ದು ಏಕೆ. ಉಂಡ ಮನೆಗೆ ಎರಡು ಬಗೆಯ ಕ್ರೂರಿ, ಇದನ್ನು ಕೂಡಲೇ ಸಿಗಿದು ಹಾಕಿ, ಷಾರ್ಕ್ ಬಾಯಿಗೆ ಹಾಕಿ, ಸಮುದ್ರಕ್ಕೆ ತಳ್ಳಿ.ಪೌಲ್ ಅನ್ನು ಕತ್ತರಿಸಿ ಸೂಪ್ ಮಾಡಿ ಅಥವಾ ಸಲಾಡ್ ಮಾಡಿ ಹಂಚಿಬಿಡಿ" ಎಂದು ಫೇಸ್ ಬುಕ್, ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜು.5ರಂದು ಎಂದಿನಂತೆ ಭವಿಷ್ಯ ಸೂಚಿಸಿದ ಪೌಲ್ , ಜರ್ಮನ್ ಡಬ್ಬಿ ಮೇಲೆ ಕೂತರೂ ನಂತರ ಪಕ್ಕದಲ್ಲಿದ್ದ ಸ್ಪೇನ್ ಡಬ್ಬಿ ಮೇಲೆ ಹೊರಳಿ, ಡಬ್ಬಿ ತೆಗೆದು ಆಹಾರದತ್ತ ಮುಖಮಾಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.
ಜರ್ಮನ್ ಪತ್ರಿಕೆಗಳ ವರದಿಯಂತೆ, ಜರ್ಮನ್ ಸೋಲಿನ ಕಾರಣದ ಬಗ್ಗೆ ಜನ ಅಷ್ಟು ತಲೆ ಕೆಡಿಸಿಕೊಂಡಿಲ್ಲ. ಆಕ್ಟೋಪಸ್ ಬಗ್ಗೆ ಓದುಗರ ರಂಜನೆಯ ಪ್ರತಿಕ್ರಿಯೆ ಯಾವ ಪತ್ರಿಕೆಯಲ್ಲಿ ಏನು ಬಂದಿದೆ ಎಂಬುದು ಎಲ್ಲರು ಕುತೂಹಲದಿಂದ ನೋಡುತ್ತಿದ್ದಾರೆ.
ಸೆಮಿಫೈನಲ್ ನಲ್ಲಿ ಜರ್ಮನಿಗೆ ಸೋಲು ಖಚಿತವಾಗುತ್ತಿದ್ದಂತೆ ಅಭಿಮಾನಿಗಳು ಡರ್ಬನ್ ಕ್ರೀಡಾಂಗಣದಲ್ಲಿ ಪೌಲ್ ಆಕ್ಟೋಪಸ್ ವಿರುದ್ಧ ಗೀತೆ ಹಾಡಿ, ಘೋಷಣೆ ಕೂಗಿದ್ದು ನಡೆಯಿತು. 2008 ರ ಯುರೋಪಿಯನ್ ಚಾಂಪಿಯನ್ ಶಿಪ್ ಫೈನಲ್ಸ್ ನಲ್ಲಿ ಜರ್ಮನಿ ಗೆಲುವನ್ನು ಸೂಚಿಸಿತ್ತು. ಆದರೆ, ಅಂತಿಮವಾಗಿ ಆ ಪಂದ್ಯವನ್ನು ಸ್ಪೇನ್ 1-0 ಅಂತರದಿಂದ ಗೆದ್ದಿತ್ತು.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications