ಶ್ರೀಲಂಕಾದಲ್ಲಿ ಅಡುಗೆ ಅನಿಲಬೆಲೆ 800 ರು

LPG Cylinder rates in India
ನವದೆಹಲಿ, ಜು. 7: ದೇಶದಲ್ಲಿ ಮಾರಾಟ ಮಾಡಲಾಗುತ್ತಿರುವ ಉತ್ತಮ ಗುಣಮಟ್ಟದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚು ಕಡಿಮೆ ನೆರೆಯ ಇತರ ದೇಶಗಳ ಬೆಲೆಗೆ ಸಮನಾಗಿದೆ, ಆದರೆ ಸೀಮೆಣ್ಣೆ ಮತ್ತು ಅಡುಗೆ ಅನಿಲ ಬೆಲೆ ದಕ್ಷಿಣ ಏಷ್ಯಾದಲ್ಲೇ ಅತೀ ಕಡಿಮೆ ಆಗಿದೆ

ಜೂನ್ 25ರ ಬೆಲೆ ಪರಿಷ್ಕಣೆಯ ನಂತರ ಪೆಟ್ರೋಲ್ ಬೆಲೆ ದೆಹಲಿಯಲ್ಲಿ ಲೀಟರಿಗೆ ರೂ 51.43 ಆಗಿದ್ದರೆ, ನೆರೆಯ ಕಾಠ್ಮಂಡುವಿನಲ್ಲಿ ರೂ 51.36 ಆಗಿದೆ. ಈ ಬೆಲೆ ಢಾಕಾದಲ್ಲಿ ರೂ 49.72 ಹಾಗೂ ಕೊಲಂಬೋದಲ್ಲಿ ರೂ 47.24 ಹಾಗೂ ಕರಾಚಿಯಲ್ಲಿ ರೂ 36.41 ಆಗಿದೆ.

ಯೂರೋ 4 ದರ್ಜೆಯ ಡೀಸೆಲ್ ಬೆಲೆ ಲೀಟರಿಗೆ ದೆಹಲಿಯಲ್ಲಿ ರೂ 40.10 ಆಗಿದ್ದು ಕರಾಚಿಯಲ್ಲಿ ರೂ 41.44, ಕಾಠ್ಮಂಡುವಿನಲ್ಲಿ ರೂ 39.24, ಕೊಲಂಬೋದಲ್ಲಿ ರೂ 29.90 ಹಾಗೂ ಢಾಕಾದಲ್ಲಿ ರೂ29.43 ಆಗಿದೆ.

ಇತರ ದೇಶಗಳ ಇಂಧನ ಬೆಲೆ ಕಡಿಮೆ ಇದ್ದರೂ ಭಾರತದಲ್ಲಿ ಯೂರೋ 3 ಹಾಗೂ ಯೂರೋ 4 ಗುಣಮಟ್ಟವನ್ನು ಕಾಪಾಡಲಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ . ಆದರೆ ಭಾರತದಲ್ಲಿ ಅಡುಗೆ ಅನಿಲ ಮತ್ತು ಸೀಮೆಣ್ಣೆ ದರ ದಕ್ಷಿಣ ಏಷ್ಯಾದಲ್ಲೆ ಅತೀ ಕಡಿಮೆ ಆಗಿದೆ.

ದೆಹಲಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಗೆ 345.55 ರೂಪಾಯಿಗಳಾಗಿದ್ದರೆ ಕರಾಚಿಯಲ್ಲಿ ರೂ 577.18, ಕಾಠ್ಮಂಡುವಿನಲ್ಲಿ ರೂ 782.84, ಕೊಲಂಬೋದಲ್ಲಿ 822.65 ಹಾಗೂ ಢಾಕಾದಲ್ಲಿ 537.37 ಇದೆ.

ಸೀಮೆಣ್ಣೆ ದರ ದೆಹಲಿಯಲ್ಲಿ ಲೀಟರಿಗೆ 12.32, ಕಾಠ್ಮಂಡುವಿನಲ್ಲಿ ರೂ 39.24, ಕರಾಚಿಯಲ್ಲಿ ರೂ 35.97, ಢಾಕಾದಲ್ಲಿ ರೂ 29.43 ಹಾಗೂ ಕೊಲಂಬೋದಲ್ಲಿ ರೂ21 ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+