ಜರ್ಮನ್ನರಿಗೆ ಶಾಕ್ ನೀಡಿದ ಅಕ್ಟೋಪಸ್ ಭವಿಷ್ಯ

Paul german octopus prediction
ಒಬೆರ್ಸೆನ್, ಜು.7: ಜರ್ಮನಿಯ ಎಲ್ಲಾ ಪಂದ್ಯಗಳ ಭವಿಷ್ಯ ಕರಾರುವಾಕ್ಕಾಗಿ ಹೇಳಿ ಇಡೀ ವಿಶ್ವದ ಮನೆಮಾತಾಗಿದ್ದ ಪೌಲ್ ಎಂಬ ಹೆಸರಿನ ಆಕ್ಟೋಪಸ್, ಜರ್ಮನಿಗೆ ಸಕತ್ ಶಾಕ್ ನೀಡಿದೆ. ಬುಧವಾರ ನಡೆಯಲಿರುವ ಫೀಫಾ ವಿಶ್ವಕಪ್ 2010 ಸೆಮಿಫೈನಲ್ಸ್ ನಲ್ಲಿ ಸ್ಪೇನ್ ವಿರುದ್ಧ ಜರ್ಮನಿ ಸೋಲುವುದೆಂದು ಪೌಲ್ ಸೂಚಿಸಿದೆ.

ಮೂಮೂಲಿಯಂತೆ ಜರ್ಮನಿಯ ಪಂದ್ಯಕ್ಕೆ ಒಂದು ದಿನ ಮುಂಚೆ, ಆಕ್ಟೋಪಸ್ ಭವಿಷ್ಯ ನೋಡಲಾಗುತ್ತದೆ. ಅದರಂತೆ, ಅಕ್ಟೋಪಸ್ ಭವಿಷ್ಯ ಪರೀಕ್ಷೆ ನಡೆಸಲಾಯಿತು. ಎಂದಿನಂತೆ ಆಹಾರ ತುಂಬಿರುವ ಎರಡು ಡಬ್ಬಿಗಳನ್ನು ಆಕ್ಟೋಪಸ್ ಇರುವ ನೀರಿನ ತಾಣದಲ್ಲಿ ಇಳಿಬಿಡಲಾಯಿತು.

ಒಂದು ಡಬ್ಬಿಗೆ ಜರ್ಮನ್ ಬಾವುಟ, ಇನ್ನೊಂದಕ್ಕೆ ಸ್ಪೇನ್ ಬಾವುಟ ಸುತ್ತಲಾಗಿತ್ತು. ಮೊದಲಿಗೆ ಜರ್ಮನ್ ಡಬ್ಬಿ ಮೇಲೆ ಕೂತರೂ ನಂತರ ಪಕ್ಕದಲ್ಲಿದ್ದ ಸ್ಪೇನ್ ಡಬ್ಬಿ ಮೇಲೆ ಹೊರಳಿ, ಡಬ್ಬಿ ತೆಗೆದು ಆಹಾರದತ್ತ ಮುಖಮಾಡಿತು. ಇದರೊಂದಿಗೆ ಸ್ಪೇನ್ ಪರ ಆಕ್ಟೋಪಸ್ ಭವಿಷ್ಯ ಹೊರಳಿದ್ದು, ಹಲವರಿಗೆ ಅಚ್ಚರಿ ಮೂಡಿಸಿದೆ.

ಪಶ್ಚಿಮ ಜರ್ಮನಿಯ ಸೀ ಲೈಫ್ ಅಕ್ವೇರಿಯಂನಲ್ಲಿರುವ ಪೌಲ್ ಎಂಬ ಆಕ್ಟೋಪಸ್ ಜರ್ಮನ್ ಆಡಿದ ಐದು ಪಂದ್ಯಗಳಿಗೆ ಭವಿಷ್ಯವನ್ನು ಹೇಳಿದ್ದು, ಎಲ್ಲವೂ ನಿಜವಾಗಿದ್ದು, ಆಕ್ಟೋಪಸ್ ನ ಜನಪ್ರಿಯತೆ ಹೆಚ್ಚಲು ಕಾರಣವಾಗಿದೆ.

ಜರ್ಮನಿಯ ಅಪ್ಪಟ್ಟ ಅಭಿಮಾನಿಗಳು ಆಕ್ಟೋಪಸ್ ನ ಭವಿಷ್ಯ ಕೊಂಚ ವಿಚಲಿತರಾದರೂ, ಮೊದಲು ಜರ್ಮನಿಯ ಡಬ್ಬಿಯ ಮೇಲೆ ಕೂತು ನಂತರ ಸ್ಪೇನ್ ಡಬ್ಬಿಯತ್ತ ಹೊರಳಿರುವುದರಿಂದ ಜರ್ಮನಿಗೆ ಅವಕಾಶ ಇನ್ನೂ ಇದೆ ಎಂದು ನಂಬಿದ್ದಾರೆ. ಆಲ್ಲದೆ, ಈ ವರೆಗೂ ಪೌಲ್ ಸೂಚಿತ ಭವಿಷ್ಯ ಶೇ.80 ರಷ್ಟು ಮಾತ್ರ ಸತ್ಯವಾಗಿದೆ.

2008 ರ ಯುರೋಪಿಯನ್ ಚಾಂಪಿಯನ್ ಶಿಪ್ ಫೈನಲ್ಸ್ ನಲ್ಲಿ ಜರ್ಮನಿ ಗೆಲುವನ್ನು ಸೂಚಿಸಿತ್ತು. ಆದರೆ, ಅಂತಿಮವಾಗಿ ಆ ಪಂದ್ಯವನ್ನು ಸ್ಪೇನ್ 1-0 ಅಂತರದಿಂದ ಗೆದ್ದಿತ್ತು. ಜರ್ಮನಿ ಆ ಪಂದ್ಯದ ಸೇಡು ತೀರಿಸಿಕೊಳ್ಳಲು ಕಾದಿದ್ದರೆ, ಪೌಲ್ ಭವಿಷ್ಯ ತಲೆಕೆಳಗಾಗಲಿ ಎಂದು ಜರ್ಮನ್ನರು ಪ್ರಾರ್ಥಿಸುತ್ತಿದ್ದಾರಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+