ರೊನೊಲ್ಡೊಗೆ ಮಗುವಾಯ್ತಂತೆ, ಆದ್ರೆ ಅಮ್ಮಯಾರು?
ಮ್ಯಾಡ್ರಿಡ್, ಜು.6: ಪೋರ್ಚುಗಲ್ ಫುಟ್ಬಾಲ್ ತಂಡದ ನಾಯಕ, ವಿಶ್ವದ ದುಬಾರಿ ಆಟಗಾರ ಪ್ಲೇ ಬಾಯ್ ಎಂದೇ ಖ್ಯಾತರಾದ ಕ್ರಿಸ್ಟಿಯಾನೋ ರೊನಾಲ್ಡೊ ತಾನು ಅಪ್ಪನಾಗಿರುವುದಾಗಿ ತಮ್ಮ ಅಧಿಕೃತ ವೆಬ್‌ಸೈಟ್ ಸೇರಿದಂತೆ ಟ್ವಿಟರ್ , ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.
ಆದರೆ, ಮಗುವಿನ ತಾಯಿಯ ಹೆಸರನ್ನು ರೊನಾಲ್ಡೊ ಗೌಪ್ಯವಾಗಿಟ್ಟಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸ್ಪಾನಿಷ್ ಲೀಗ್‌ನಲ್ಲಿ ರಿಯಲ್ ಮ್ಯಾಡ್ರಿಡ್ ಪರ ಆಡುವ ರೊನಾಲ್ಡೊ ನಾನು ಒಂದು ಗಂಡು ಮಗುವಿಗೆ ತಂದೆಯಾಗಿದ್ದು, ತಾಯಿಯ ಹೆಸರನ್ನು ಹೇಳಲು ಇಷ್ಟಪಡುವುದಿಲ್ಲ. ಅಭಿಮಾನಿಗಳಿಗೆ ನನ್ನ ಪರಿಸ್ಥಿತಿ ಅರ್ಥವಾಗುತ್ತದೆ ಎಂದು ತಿಳಿದಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಮಗು ನನ್ನ ಬಳಿಯಿದ್ದು ನಾನೇ ಅದರ ಅಪ್ಪ ಅಮ್ಮನಾಗಿ ಪೋರ್ಚುಗಲ್ ನಲ್ಲಿ ಬೆಳೆಸುತ್ತೇನೆ ಎಂದಿರುವ 25ರ ಪ್ರಾಯದ ರೊನಾಲ್ಡೊ ಮಗುವಿನ ಜನ್ಮದಿನಾಂಕವನ್ನು ಸಹ ನೀಡಲು ನಿರಾಕರಿಸಿದ್ದಾರೆ. ರೊನಾಲ್ಡೊ ಈವರೆಗೂ ಅಧಿಕೃತವಾಗಿ ಮದುವೆಯಾಗಿಲ್ಲ. ಆದರೆ, ಹಲವಾರು ರೂಪದರ್ಶಿರ ಹಿಂದೆ ಓಡಾಡಿದ್ದು ನಡೆದಿದೆ. ಬೆಂಗಾಲಿ ಬೆಡಗಿ ಬಿಪಾಶಾಗೆ ಕೂಡಾ ರೊನೊಲ್ಡೊ ಮಧುರ ಚುಂಬನದ ರುಚಿ ತೋರಿಸಿದ್ದ.
ರೊನೊಲ್ಡೊ ಪ್ರೇಯಸಿಯರು: ರೊನೊಲ್ಡೊ ಗೆಳತಿ ರಷ್ಯಾದ ಒಳಉಡುಪಿನ ಜಾಹೀರಾತು ರೂಪದರ್ಶಿ ಇರಿನಾ ಶಾಯ್ಕ್ ಕೂಡಾ ರೊನೊಲ್ಡೊ ಅಪ್ಪ ಆಗಿರುವುದನ್ನು ಖಾತ್ರಿ ಪಡೆಸಿ ಫೇಸ್ ಬುಕ್ ನಲ್ಲಿ ಹಾಕಿದ್ದಾರೆ. ಅಟ್ಲಾಂಟಿಕ್ ತೀರದಲ್ಲಿ ಕಳೆದ ಒಂಬತ್ತುತಿಂಗಳಲ್ಲಿ ಪ್ರವಾಸ ಹಾಗೂ ರಜೆಯನ್ನು ರೊನೊಲ್ಡೊ ಕಳೆದಿದ್ದರು. ಈ ಹಿನ್ನೆಲೆಯಲ್ಲಿ ಮಗುವಿನ ತಾಯಿ ಅಮೆರಿಕನ್ ಇರಬಹುದೇ ಎಂಬ ಸಂಶಯ ವ್ಯಕ್ತವಾಗಿದೆ.
ನಟಿಯರಾದ ಪ್ಯಾರಿಸ್ ಹಿಲ್ಟನ್, ಜೆಮ್ಮಾ ಅಟ್ಕಿನ್ಸನ್, ಇಟಲಿಯ ರೂಪದರ್ಶಿ ಲೆಟಿಜಿಯಾ ಫಿಲಿಪ್ಪಿ, ವೆಲ್ಷ್ ನ ನಟಿ ಇಮೊಗೆನ್ ಥಾಮಸ್ , ಬ್ರೆಜಿಲ್ ನ ಫಿಟ್ ನೆಸ್ ಟ್ರೈನರ್ ಗ್ಯಾಬ್ರಿಲಾ ಏಂಟಿನ್ಜರ್, ಕೊಲಂಬಿಯಾದ ಮಿರೆಲ್ಲ ಗ್ರಿಸಲೆಸ್, ಬ್ರೆಜಿಲಿನ ಬೆಡಗಿ ರೈಕಾ ಒಲಿವೈರಾ.. ಊಫ್ .. ಪಟ್ಟಿ ಮುಂದುವರೆಯುತ್ತಲೇ ಇರುತ್ತದೆ.
ಸೆಕ್ಸಿ ಅಂಗಾಗಗಳ ಒಡತಿ ಕಿಂ ಕರ್ದಶಿಯನ್ ಕೂಡಾ ರೊನೊಲ್ಡೊ ಜತೆ ಕಾಲಕಳೆದಿದ್ದಳು. ಈ ಸಮಯದಲ್ಲಿ ರೊನೊಲ್ಡೊಳಿಂದ ಪರಿತ್ಯಕ್ತಳಾದ ಹಳೆ ಗೆಳತಿ ಹೇಳಿಕೆ ನೆನಪಿಗೆ ಬರುತ್ತದೆ.
"ನನ್ನ ಬಿಟ್ಟ ಮೇಲೆ ಇನ್ನು ಎಷ್ಟು ಮಂದಿ ಅವನ ಹಿಂದೆ ಬೀಳುತ್ತಾರೊ, 8 ಸಾವಿರ ಅವನ ಗುರಿ" ಎಂದಿದ್ದಳು. ರಸಿಕ ಕ್ರೀಡಾಪಟು ರೊನೊಲ್ಡೊ, ಮಗುಗಾದರೂ ಒಳ್ಳೆ ಬುದ್ಧಿ ಕೊಡಪ್ಪ ದೇವ್ರೆ ಎಂದು ಕೆಲವರು ಶುಭಹಾರೈಸಿದ್ದಾರೆ.












Click it and Unblock the Notifications