ಭಾರತ್ ಬಂದ್ ನಿಂದ ಐಟಿ ಉದ್ಯಮ ಸ್ಥಗಿತ

ಬೆಂಗಳೂರಿನ ಪ್ರಮುಖ ಕಂಪನಿಗಳಾದಇನ್ಪೋಸಿಸ್, ವಿಪ್ರೋ ಕಚೇರಿಗೆ ರಜೆಯನ್ನು ಶುಕ್ರವಾರವೇ ರಜೆ ಘೋಷಿಸಿದ್ದವು. ಐಟಿ ಉದ್ಯಮದ ಇತರ ಬೃಹತ್ ಕಂಪನಿಗಳಾದ ಒರಾಕಲ್ , ಟೆಕ್ಸಾಸ್ ಇನಸ್ಟ್ರುಮೆಂಟ್ಸ್, ಮೈಂಡ್ ಟ್ರೀ, ಜುಲೈ ಸಿಸ್ಟಮ್ಸ್, 3ಐ ಇನ್ಫೋಟೆಕ್ ಮುಂತಾದವು ಸೋಮವಾರ ರಜೆ ಘೋಷಿಸಿದ್ದು ಇಂದಿನ ಕೆಲಸವನ್ನು ಶನಿವಾರ ಮಾಡಬೇಕಿದೆ. ಆದರೆ ಟಿ ಸಿ ಎಸ್, ಗ್ರೇನಿಯಂ ಇನ್ ಫಾರ್ಮೆಷನ್ ಟೆಕ್ನಾಲಜಿ ಮತ್ತು ಮೈಕ್ರೋ ಸಾಫ್ಟ್ ರಜೆ ಘೋಷಿಸಿಲ್ಲ.
ಹ್ಯೂಲೆಟ್ ಪ್ಯಾಕರ್ಡ್ ತನ್ನ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ. ವಿಪ್ರೋ ಮೊದಲಿನಿಂದಲೂ ಇಂಥಹ ಸಂದರ್ಭದಲ್ಲಿ ರಜೆ ಘೋಷಿಸುವ ಪರಿಪಾಠವನ್ನಿಟ್ಟುಕೊಂಡಿದ್ದು ವಾರದ ಇನ್ನೊಂದು ದಿನ ಕೆಲಸ ಮಾಡಬೇಕಾಗುವುದರಿಂದ ಸಿಬ್ಬಂದಿಗಳು ಸಂತೋಷವಾಗಿ ರಜೆಯನ್ನು ಅನುಭವಿಸುತ್ತಾರೆ ಎಂದು ಉದ್ಯೋಗಿಯೊಬ್ಬರು ಹೇಳಿದರು.
ಕೋಲ್ಕತಾದಲ್ಲಿ ಟಿಸಿಎಸ್ ತನ್ನ ಉದ್ಯೋಗಿಗಳು ಕಚೇರಿಗೆ ತುರ್ತು ಕೆಲಸಕ್ಕೆ ತೆರಳಲು ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ಕೋಲ್ಕತಾದಲ್ಲಿ ಬೆಳಿಗ್ಗೆ 11ರತನಕ ಐಟಿ ಉದ್ಯೋಗಿಗಳ ಹಾಜರಿ ಶೇ.45 ಆಗಿತ್ತು. ಬಹುತೇಕ ಉದ್ಯೋಗಿಗಳು ನಸುಕಿನಲ್ಲೇ ಕೆಲಸಕ್ಕೆ ತೆರಳಿದ್ದರಿಂದ ಹೆಚ್ಚಿನ ಹಾಜರಾತಿ ಸಾದ್ಯವಾಯಿತು. ಒಟ್ಟಿನಲ್ಲಿ ಐಟಿ ಉದ್ಯಮ ಬಹುತೇಕ ಸ್ಥಗಿತವಾಗಿತ್ತು.
ಈ ಬಂದ್ ನಿಂದ ಐಟಿ ಕ್ಷೇತ್ರಕ್ಕೆ ಆದ ನಷ್ಟವಾದರೂ ಎಷ್ಟು?












Click it and Unblock the Notifications