ಹೆಂಡತಿಯನ್ನೇ ವೇಶ್ಯಾವಾಟಿಕೆಗೆ ತಳ್ಳಿದ ಗಂಡ

ಗ್ರೇಟರ್ ನೊಯಿಡಾದಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಮಾನವ ಸಂಪನ್ಮೂಲ ಎಕ್ಸಿಕ್ಯೂಟಿವ್ ಆಗಿದ್ದ 25 ವರ್ಷದ ಮಹಿಳೆ ತನ್ನನ್ನೇ ಗಂಡ ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದನೆಂದು ದೂರು ನೀಡಿದ್ದಾಳೆ. ಮದುವೆಯ ಸಮಯದಲ್ಲಿ ಭರ್ತಿ ವರದಕ್ಷಿಣೆ ನೀಡಲಾಗಿದ್ದರೂ ಗಂಡನ ಮನೆಯವರಿಗೆ ಅದು ಸಾಕಾಗಿರಲಿಲ್ಲ. ಹಾಗಾಗಿ ಗಂಡ ಇಂಥ ಹೇಯ ಕೃತ್ಯಕ್ಕೆ ಕೈಹಾಕಿದ್ದ.
ಗಂಡ ಕೂಡ ದಕ್ಷಿಣ ದೆಹಲಿಯ ಕಂಪನಿಯೊಂದರಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಹೆಚ್ಚಿನ ವರದಕ್ಷಿಣೆ ತರದ ತಪ್ಪಿಗೆ ತನ್ನ ಸ್ನೇಹಿತರೊಂದಿಗೆ ಸಾಮೂಹಿಕ ರತಿಕ್ರೀಡೆ ನಡೆಸಲು ಹೆಂಡತಿಯನ್ನು ಆತ ಒತ್ತಾಯಿಸುತ್ತಿದ್ದ. ನೊಂದ ಮಹಿಳೆ ನೊಯಿಡಾದಲ್ಲಿ ಈ ಕುರಿತು ದೂರು ದಾಖಲಿಸಿದ್ದಾಳೆ. ತನಿಖೆ ಪ್ರಗತಿಯಲ್ಲಿದೆ.
ಕೆಲ ದಿನಗಳ ಹಿಂದೆ ಇದೇ ಬಗೆಯ ಪ್ರಕರಣ ದೇಶದ ರಾಜಧಾನಿಯಲ್ಲಿ ನಡೆದಿತ್ತು. ಭಂಡ ಗಂಡ ತನ್ನ ಹೆಂಡತಿಯನ್ನು ಸ್ನೇಹಿತರೊಡನೆ, ಸಹೋದರರೊಡನೆ ಲೈಂಗಿಕ ಕ್ರಿಯೆ ನಡೆಸಲು ತಳ್ಳಿದ್ದ. ನತದೃಷ್ಟೆ ಸತತ ಎಂಟು ತಿಂಗಳುಗಳ ಕಾಲ ಅನ್ಯರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಳು.












Click it and Unblock the Notifications