ಬ್ರೆಜಿಲ್ ಕನಸು ನುಚ್ಚುನೂರು ಮಾಡಿದ ಹಾಲೆಂಡ್

Brazil crashes out‎
ಪೋರ್ಟ್ ಎಲಿಜಬೆತ್, ಜು.3: ಈ ಬಾರಿ ಫುಟ್ ಬಾಲ್ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಬ್ರೆಜಿಲ್ ಸಹ ಒಂದಾಗಿತ್ತು. ಆದರೆ ಬ್ರೆಜಿಲ್ ತಂಡ ಕ್ವಾರ್ಟರ್ ಫೈನಲ್ ನಲ್ಲಿ 1-2 ಗೋಲುಗಳ ಅಂತರದಿಂದ ಹಾಲೆಂಡ್ ವಿರುದ್ಧ ಸೋಲನುಭವಿಸಿತು. ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳ ಬೆಟ್ಟದಷ್ಟು ಆಸೆ ಮಂಜಿನಂತೆ ಕರಗಿಹೋಯಿತು. ಜಗತಿನಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ನಿರಾಸೆಯ ಕಡಲಲ್ಲಿ ಮುಳುಗಿಸಿತು.

ಪಂದ್ಯದ ಪ್ರಥಮಾರ್ಧದಲ್ಲಿ ಬ್ರೆಜಿಲ್ ತಂಡ ಆಟದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದರು. ಪಂದ್ಯ ಆರಂಭವಾದ ಹತ್ತನೇ ನಿಮಿಷದಲ್ಲೆ ಮೊದಲ ಯಶ ಸಿಕ್ಕಿತ್ತು. ಫಿಲಿಪೆ ಮೊಲೊ ಪಾಸ್ ನಿಂದ ಬಂದ ಚೆಂಡನ್ನು ರಾಬಿನೊ ಯಶಸ್ವಿಯಾಗಿ ಗುರಿ ಮುಟ್ಟಿಸಿ ತಮ್ಮ ತಂಡ ಮುನ್ನಡೆ ಪಡೆಯುವಂತೆ ಮಾಡಿದರು.

ದ್ವಿತೀಯಾರ್ಧದಲ್ಲಿ ಕಳಪೆ ಪ್ರದರ್ಶನ ತೋರಿದ ಪರಿಣಾಮವಾಗಿ ಬ್ರೆಜಿಲ್ ತಕ್ಕ ಬೆಲೆ ಕಟ್ಟಬೇಕಾಯಿತು. 53ನೇ ನಿಮಿಷದಲ್ಲಿ ಬ್ರೆಜಿಲ್ ನ ಫಿಲಿಪ್ ಮೆಲ್ಲೊ ಸೆಲ್ಫ್ ಗೋಲ್ ಹೊಡೆಯುವ ಮೂಲಕ ಹಾಲೆಂಡ್ ಗೆ ಉಡುಗೊರೆಯ ಗೋಲು ನೀಡಿದರು. ಇದರಿಂದ ಉತ್ತೇಜಿತರಾದ ಹಾಲೆಂಡ್ ತಂಡ ಮತ್ತಷ್ಟು ಉತ್ತೇಜನದಿಂದ ಆಡಿತು.

ಬ್ರೆಜಿಲ್ ನ ದುರ್ಬಲ ರಕ್ಷಣೆಯ ಪ್ರಯೋಜನ ಪಡೆದ ವೆಸ್ಲಿ ಸ್ಪೈಡರ್ ಆಕರ್ಷಕ ಹೆಡ್ ಮೂಲಕ ಗೋಲು ಗಳಿಸಿದರಲ್ಲದೆ ತಮ್ಮ ತಂಡವನ್ನು ಸೆಮಿಫೈನಲ್ ಸ್ಥಾನವನ್ನು ಗಟ್ಟಿಗೊಳಿಸಿದರು. ಆಟ ಮುಕ್ತಾಯ ಹಂತ ತಲುಪುತ್ತಿದ್ದಂತೆ ಬ್ರೆಜಿಲ್ ಗೋಲು ಗಳಿಸಲು ಹರಸಾಹಸ ಪಟ್ಟಿತು. ಆದರೆ ಬ್ರೆಜಿಲ್ ತಂಡದ ಪ್ರಯತ್ನ ಫಲಿಸಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+