ಐಟಿ ನೌಕ್ರಿ, ಐಟಿ ನೌಕ್ರಿ ಯಾರಿಗೆ ಬೇಕು!
ಬೆಂಗಳೂರು, ಜು. 1 : ಆರ್ಥಿಕ ಕುಸಿತ ಕಂಡಾಗ ಲಕ್ಷಾಂತರ ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಂಡು ಮನೆ ಸೇರಿದ್ದು, ಮಸಣ ಸೇರಿದ್ದು ಗೊತ್ತೆ ಇದೆ. ಆದರೆ, ಆ ಕಾಲ ಸರಿದು ಹೋಗಿದೆ. ಆರ್ಥಿಕ ಕುಸಿತದಿಂದ ಚೇತರಿಸಿಕೊಂಡ ಸಾಫ್ಟ್ ವೇರ್ ಮಾರುಕಟ್ಟೆಯಲ್ಲಿ ಜಣಜಣ ಕಾಂಚಾಣ ಕುಣಿದಾಡತೊಡಗಿದೆ. ಲಕ್ಷಾಂತರ ಐಟಿ ನೌಕರಿಗಳು ಸೃಷ್ಟಿಯಾಗಿವೆ. ಹೀಗಾಗಿ ಅನುಭವಿ ಉದ್ಯೋಗಿಗಳಿಗೆ ಭಾರಿ ಬೇಡಿಕೆ ಹೆಚ್ಚಿದೆ.
3 ರಿಂದ 8 ವರ್ಷ ಅನುಭವವ ಹೊಂದಿರುವ ಪ್ರೊಜೆಕ್ಟ್ ಮ್ಯಾನೇಜರ್ ಗಳನ್ನು ಉಳಿಸಿಕೊಳ್ಳುವುದು ಕಂಪನಿಗಳಿಗೆ ದೊಡ್ಡ ತಲೆ ನೋವಾಗಿದೆ. ಟಿಸಿಎಸ್, ಇನ್ಫೋಸಿಸ್ ಮತ್ತು ವಿಪ್ರೋದಂತಹ ದೈತ್ಯ ಐಟಿ ಕಂಪನಿಗಳಿಗೂ ಇದರ ಬಿಸಿ ತಟ್ಟಿದೆ. ಕಳೆದ ತಿಂಗಳ ಹಿಂದೆ ಐಟಿ ಕಂಪನಿಗಳು ವೇತನ ಏರಿಕೆ, ಇತರೆ ಭತ್ಯೆ ಕಾರ್ಯದಲ್ಲಿ ಮಗ್ನವಾಗಿದ್ದವು. ಬೇಡಿಕೆ ಹೆಚ್ಚಳ ಬೆನ್ನಲ್ಲೇ ಸಾಫ್ಟ್ ವೇರ್ ಇಂಜಿನಿಯರ್ ಗಳ ಉಳಿಸುವ ಕಸರತ್ತು ನಡೆದಿದೆ. ಇದೀಗ ಉದ್ಯೋಗಿಗಳ ವಲಸೆ ತಾರಕಕ್ಕೇರಿದೆ. ಕೆಲ ಕಂಪನಿಗಳಲ್ಲಿ ಶೇ. 40 ನೌಕರರು ಕೆಲಸ ಬಿಟ್ಟು ಹೋಗಿದ್ದಾರೆ.
ನಾಸ್ಕಾಮ್ ಪ್ರಕಾರ, ಈ ವರ್ಷ ಉದ್ಯಮ 90,000 ನೌಕರರನ್ನು ನೇಮಕ ಮಾಡಿಕೊಳ್ಳುವ ನಿರೀಕ್ಷೆ ಇದೆ. ಇದರೊಂದಿಗೆ ದೇಶದಲ್ಲಿ ಐಟಿ ನೌಕರರ ಸಂಖ್ಯೆ 23 ಲಕ್ಷಕ್ಕೆ ಏರಿಕೆಯಾಗಲಿದೆ. ಇನ್ಫೋಸಿಸ್, ಎಚ್ ಪಿ, ಎಂಫಸಿಸ್ ನಂತಹ ಕಂಪನಿಗಳು ಆರ್ಥಿಕ ಕುಸಿತ ಸಮಯದಲ್ಲಿ ಮನೆ ಕಳುಹಿಸಿದ್ದ ನೌಕರರನ್ನು ಮರಳಿ ಕೆಲಸ ತೆಗೆದುಕೊಳ್ಳತೊಡಗಿವೆ.











Click it and Unblock the Notifications