ಸೋತ ಸಿಟ್ಟಲ್ಲಿ ಕೆಮೆರಾಮ್ಯಾನ್ ಗೆ ಉಗಿದ ರೊನಾಲ್ಡೊ

ಪಂದ್ಯ ಮುಕ್ತಾಯಗೊಂಡು ರೆಫ್ರಿ ಕೊನೆ ವಿಷಲ್ ಊದುತ್ತಿದ್ದಂತೆ, ರೊನೊಲ್ಡೊಗೆ ಮಾಧ್ಯಮದ ಬೆಳಕು ತಮ್ಮ ಮೇಲೆ ಬೀಳುವುದು ಇಷ್ಟವಾಗಲಿಲ್ಲ. ಹಿಂದೆ ಮುಂದೆ ಸುತ್ತುತ್ತಿದ್ದ ಕೆಮರಾಮ್ಯಾನ್ ಕಡೆ ಕೈ ತೋರಿಸಿ ಅವನು ಬರುವ ಹಾದಿಯಲ್ಲಿ ತುಪ್ಪಿದ್ದಾರೆ. ಇದು ಇಡೀ ವಿಶ್ವದೆಲ್ಲೆಡೆ ಪ್ರಸಾರವಾಗಿ ಪೋರ್ಚುಗಲ್ ಗೆ ಮುಜುಗರ ತಂದಿದೆ.
ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ
ಇಡೀ ಟೂರ್ನಿಯಲ್ಲಿ ರೊನೊಲ್ಡೊ ಗಳಿಸಿದ್ದು ಒಂದೇ ಗೋಲು. ಅದು ದುರ್ಬಲ ಉತ್ತರ ಕೊರಿಯಾ ವಿರುದ್ದ್ಧದ ಪಂದ್ಯದಲ್ಲಿ. ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಕೊಂಚ ಮೈಚಳಿ ಆಡಿದರೂ ನಿರೀಕ್ಷಿತ ಮಟ್ಟದ ಆಟವನ್ನು ಪ್ರದರ್ಶಿಸುವಲ್ಲಿ ರೊನೊಲ್ಡೊ ಸಂಪೂರ್ಣ ವಿಫಲರಾಗಿದ್ದರು.
ಪಂದ್ಯದ ನಂತರ ರೊನೊಲ್ಡೊರನ್ನು ಪ್ರಶ್ನಿಸಿದಾಗ, 'ಕರ್ಲೊ ಕ್ವೈರೊಜ್ ರನ್ನು ಕೇಳಿ ಹೋಗಿ' ಎಂದು ಕೋಚ್ ಕಡೆಗೆ ಬೆಟ್ಟು ಮಾಡಿ ತೋರಿಸಿದರು. ಸ್ಪೇನ್ ವಿರುದ್ಧ ಋಣಾತ್ಮಕ ರಣತಂತ್ರ ಬಳಸಿ ಮುನ್ನುಗ್ಗಲೆತ್ನಿಸಿದ ಪೋರ್ಚುಗೀಸರಿಗೆ ಸರಿಯಾದ ಪೆಟ್ಟು ಬಿತ್ತು, ರೊನೊಲ್ಡೊ ಕೂಡಾ ವಿಫಲರಾದರು.
ರೊನೊಲ್ಡೊ ಮಾತನ್ನು ಪುರಸ್ಕರಿಸಿ ಹೇಳುವುದಾದರೆ, ಪೋರ್ಚು ಗೀಸ್ ಕೊಚ್ ಗೇಮ್ ಪ್ಲಾನ್ ತಂಡದ ಸೋಲಿಗೆ ಬಹುಮಟ್ಟಿಗೆ ಕಾರಣವಿರಬಹುದು. ಆದರೆ, ಪತ್ರಕರ್ತರ ಮೇಲೆ ಉಗಿಯುವುದು ರೊನೊಲ್ಡೊರಂತಹ ಆಟಗಾರರಿಗೆ ಶೋಭೆ ತರುವುದಿಲ್ಲ.












Click it and Unblock the Notifications