ಪೋರ್ಚುಗೀಸರ ಹೊರನೂಕಿದ ಸ್ಪೇನ್ ಗೂಳಿಗಳು

ಪ್ರಿ ಕ್ವಾಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್ ವಿರುದ್ಧ 1-0 ಅಂತರದಿಂದ ಸೋಲುಂಡ ರೊನಾಲ್ಡೊ ಪಡೆ ಅಭಿಮಾನಿಗಳಿಗೆ ನಿರಾಶೆ ಮೂಡಿಸಿತು. ಸ್ಪೇನ್ ಪಾಲಿಗೆ ಮತ್ತೊಮ್ಮೆ ಡೇವಿಡ್ ವಿಲ್ಲಾ ಹೀರೋ ಆಗಿ ಮಿಂಚಿದರು.
ನಿರೀಕ್ಷೆಯಂತೆ ಕಡಿಮೆ ಅಂತರದ ಗೋಲುಗಳಿಂದ ಸ್ಪೇನ್ ಜಯ ಗಳಿಸಿದರೂ, ಪೋರ್ಚುಗಲ್ ಆಟಕ್ಕೆ ಸೂಕ್ತವಾದ ಯೋಜನೆಯಿರಲಿಲ್ಲ. ಮೊದಲಾರ್ಧದಲ್ಲಿ ಪರಸ್ಪರ ಸಮಬಲದ ಹೋರಾಟವನ್ನು ಎರಡು ತಂಡಗಳು ನೀಡಿದರೂ, ದ್ವಿತೀಯಾರ್ಧದಲ್ಲಿ ಸ್ಪೇನ್ ಚೆಂಡನ್ನು ಆದಷ್ಟು ತನ್ನ ಬಳಿಯೇ ಕಾಯ್ದುಕೊಂಡು ಪದೇ ಪದೇ ದಾಳಿ ಮಾಡಿ, ಪೋರ್ಚುಗಲ್ ನ ಡಿಫೆಂಡರ್ ಗಳನ್ನು ಕಂಗೆಡಿಸಿಬಿಟ್ಟಿತು.
ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಅಂಕಗಳ ಪಟ್ಟಿ ||
ರೊನಾಲ್ಡೊ ಪಂದ್ಯದ 20 ನೇ ನಿಮಿಷದ ಸುಮಾರಿಗೆ ಫ್ರೀಕಿಕ್ ಮೂಲಕ ಗೋಲು ಹೊಡೆಯುವ ಪ್ರಯತ್ನ ಮಾಡಿದರೂ ವಿಫಲರಾದರೂ. ಉತ್ತಮ ಪ್ರದರ್ಶನ ನಡುವೆಯೂ ಸರಿಯಾದ ಗೇಮ್ ಪ್ಲಾನ್ ಇಲ್ಲದೆ ಪೋರ್ಚುಗೀಸರು ದ್ವಿತೀಯಾರ್ಧ ಪೂರ್ತಿ ಸ್ಪೇನ್ ಗೂಳಿಗಳ ದಾಳಿಯನ್ನು ತಡೆಗಟ್ಟುವಲ್ಲೇ ನಿರತರಾಗಿಬಿಟ್ಟರು.
88 ನೇ ನಿಮಿಷದಲ್ಲಿ ರಿಕಾರ್ಡೋ ಕೋಸ್ಟ್ಟಾ ಗೆ ರೆಡ್ ಕಾರ್ಡ್ ನೀಡಿದ ನಿರ್ಣಯ ಸ್ವಲ್ಪ ಅತಿ ಎನಿಸಿದರೂ, ಸಮಯ ಮಿಂಚಿತ್ತು. ಮತ್ತೆ ವೈಫಲ್ಯ ಕಂಡ ಸ್ಪೇನ್ ನ ಜನಪ್ರಿಯ ಆಟಗಾರ ಟೊರೆಸ್ ದ್ವಿತೀಯಾರ್ಧದಲ್ಲಿ ಅನಿವಾರ್ಯವಾಗಿ ಸ್ಪೇನ್ ಕೋಚ್ ಬದಲಿಸಿದರು.
ಪಂದ್ಯದ 62 ನೇನಿಮಿಷದಲ್ಲಿ ಡೇವಿಡ್ ವಿಲ್ಲಾ ಗೋಲಿನಿಂದ ಚಿಮ್ಮಿ ವಾಪಾಸ್ ಬಂದ ಚೆಂಡನ್ನು ಗೋಲಾಗಿಸಿ ಜಯದ ಮುದ್ರೆ ಹೊಡೆದು ಬಿಟ್ಟರು. ಯುರೋ ಚಾಂಪಿಯನ್ ಗಳಾಗಿರುವ ಸ್ಪೇನ್ ತಂಡ, ಈ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಎನಿಸಿದೆ.
ಪೋರ್ಚುಗೀಸ್ 2006 ರಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದೇ ಸಾಧನೆಯಾಗಿದ್ದು, ಈ ಬಾರಿ ಉತ್ತಮ ತಂಡ ಹೊಂದಿದ್ದರು ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲವಾಗಿ ಹಿಂತಿರುಗಿದೆ.
ಇದೇ ಪ್ರಥಮ ಬಾರಿಗೆ ಕ್ವಾಟರ್ ಫೈನಲ್ ತಲುಪಿರುವ ಪೆರುಗ್ವೆ ವಿರುದ್ಧ ಜು. 3ರಂದು ಸ್ಪೇನ್ ಸ್ಪರ್ಧಿಸಲಿದೆ. ಸ್ಪೇನ್ ನಓಟವನ್ನು ತಡೆಯಲು ಪೆರುಗ್ವೆ ಉತ್ತಮ ರಣತಂತ್ರ ರೂಪಿಸುವ ಅಗತ್ಯವಿದೆ. ಸದ್ಯಕ್ಕಂತೂ ಸ್ಪೇನ್ ಸೆಮಿಸ್ ಮೇಲೆ ಕಣ್ಣ್ಣಿಟ್ಟಿದೆ.











Click it and Unblock the Notifications