ನೋಯಿಡಾ : ಮನೆ ಕೊಟ್ಟ ನಂತ್ರ ಮಾನ ಕಳೆದ
ನವದೆಹಲಿ,
ಜೂ. 30 : ಅತ್ಯಾಚಾರ ಪ್ರಕರಣಗಳು ಹೊಸದೇನಲ್ಲ. ಆದರೆ, ನಂಬಿಕೆ ದ್ರೋಹ ಎಸಗುವ ಮೂಲಕ ಮನೆ ಮಾಲೀಕನೊಬ್ಬ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿರುವ ಪ್ರಸಂಗ ಉತ್ತರ ಪ್ರದೇಶದ ನೋಯಿಡಾದಲ್ಲಿ ಸೋಮವಾರ ಬೆಳಕಿಗೆ ಬಂದಿದೆ. id="toptextpromo">ಮಾಸ್
ಕಮ್ಯುನಿಕೇಷನ್ ವಿದ್ಯಾರ್ಥಿನಿಯಾಗಿರುವ ಬ್ರೆಜಿಲ್ ಮೂಲದ ಯವತಿಯ ಮೇಲೆ ಮನೆ ಮಾಲೀಕನೇ ಕಾಫಿಯಲ್ಲಿ ನಿದ್ರೆ ಬರುವ ಮಾತ್ರೆಗಳನ್ನು ಬೆರೆಸಿ ಅತ್ಯಾಚಾರ ಎಸಗಿದ್ದಾನೆ. ಜೂನ್ ಮೊದಲ ವಾರದಲ್ಲಿ ಭಾರತಕ್ಕೆ ಬಂದಿದ್ದ ಈ ಯುವತಿ ನೋಯಿಡಾದಲ್ಲಿ ಮನೆಯೊಂದರಲ್ಲಿ ವಾಸವಾಗಿದ್ದಳು. ಜೂನ್ 19 ರಂದು ಮನೆ ಮಾಲೀಕ ಯುವತಿಗೆ ಕಾಫಿಯಲ್ಲಿ ಮತ್ತು ಬರುವ ಮಾತ್ರೆ ಬೆರೆಸಿ ಅತ್ಯಾಚಾರ ನಡೆಸಿದ್ದಾನೆ. id='are-slot-1' class='oiad oi-axt oiadv'> id='top-searched-articles'>ನಂತರ
ಜೂನ್ 27 ರಂದು ಅತ್ಯಾಚಾರಕ್ಕೆ ಮುಂದಾದಾಗ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆ ಮಾಲೀಕನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಯುವತಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.











Click it and Unblock the Notifications