ಆಫ್ರಿಕಾದ ಘನತೆಗೆ ತಕ್ಕ ಆಟವಾಡಿದ ಘಾನಾ

ಪಂದ್ಯದ ಆರಂಭದ 5ನೇನಿಮಿಷದಲ್ಲಿ ಕೆವಿನ್ ಪ್ರಿನ್ಸ್ ಇಬ್ಬರು ಯುಎಸ್ ಡಿಫೆಂಡರ್ ಗಳ ಮಧ್ಯದಿಂದ ಮುನ್ನುಗ್ಗಿ ಆಕರ್ಷಕ ಗೋಲು ಹೋಡೆದು, ಅಮೆರಿಕಕ್ಕ್ಕೆ ಎಚ್ಚರಿಕೆ ನೀಡಿದರು. ಗೋಲು ಹೊಡೆಯಲು ಡೊನೊವನ್ ಪಡೆ ಮಾಡಿದ ಎಲ್ಲಾ ಪ್ರಯತ್ನಗಳನ್ನು ಘಾನಾದ ರಕ್ಷಣಾ ಪಡೆ ಸಮರ್ಥವಾಗಿ ತಡೆಗಟ್ಟಿತು.
ಪಂದ್ಯದ 61 ನೇ ನಿಮಿಷದಲ್ಲಿ ಪೆನಾಲ್ಟಿಕಿಕ್ ಮೂಲಕ ಡೊನೊವನ್ ಗೋಲು ಹೊಡೆದು ಸಮಬಲ ಸಾಧಿಸಿದರು. ಪಂದ್ಯದ ಪೂರ್ಣಾವಧಿ ಮುಗಿದರೂ ಎರಡು ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ.
ಮತ್ತೆ ಹತ್ತು ನಿಮಿಷಗಳ ಹೆಚ್ಚುವರಿ ಸಮಯದಲ್ಲಿ ಘಾನಾದ ಹೆಮ್ಮೆಯ ಆಟಗಾರ ಗ್ಯಾನ್ ಅದ್ಭುತವಾಗಿ ಗೋಲು ಹೊಡೆದು ಘಾನಕ್ಕೆ ಜಯ ತಂದು ಕೊಟ್ಟರು. ಜುಲೈ.2ರಂದು ನಡೆಯಲಿರುವ ಕ್ವಾಟರ್ ಫೈನಲ್ಸ್ ನಲ್ಲಿ ಘಾನಾ ತಂಡ ಉರುಗ್ವೆಯನ್ನು ಎದುರಿಸಲಿದೆ.












Click it and Unblock the Notifications