ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರಿಯಾದ ಆಸೆಗೆ ಕೊಳ್ಳಿ ಇಟ್ಟ ಉರುಗ್ವೆ

By Mahesh
|
Google Oneindia Kannada News

ಪೋರ್ಟ್ ಎಲಿಜಬೆತ್ , ಜೂ. 27: ಫೀಫಾ ವಿಶ್ವಕಪ್ 2010 ನಾಕೌಟ್ ಹಂತಕ್ಕೆ ಭರ್ಜರಿ ಆರಂಭ ಸಿಕ್ಕಿದೆ. ನಿರೀಕ್ಷೆಯಂತೆ ಉರುಗ್ವೆ 2-1 ಅಂತರದಿಂದ ಕೊರಿಯಾ ವಿರುದ್ಧ ಜಯಭೇರಿ ಬಾರಿಸಿದರೂ, ಸುರಿವ ಮಳೆಯಲ್ಲಿ ವೀರಾವೇಶದಿಂದ ಹೋರಾಡಿದ ದಕ್ಷಿಣ ಕೊರಿಯಾ, ಉರುಗ್ವೆ ರಕ್ಷಣಾ ಪಡೆಯ ಬೆವರಿಳಿಸಿತು. ಉರುಗ್ವೆ ಕ್ವಾಟರ್ ಫೈನಲ್ ತಲುಪಿದ ಮೊದಲ ತಂಡ ಎನಿಸಿತು.

ಫೀಫಾ ವಿಶ್ವಕಪ್ 2010 :
ವಿಶ್ವಕಪ್ ವೇಳಾಪಟ್ಟಿ || ಅಂಕಗಳ ಪಟ್ಟಿ ||

ಮೊದಲಾರ್ಧದಲ್ಲಿ ಉರುಗ್ವೆ ಆರ್ಭಟವೇ ಹೆಚ್ಚಾಗಿತ್ತು. ಆರಂಭದ ಹತ್ತು ನಿಮಿಷದಲ್ಲೇ ಗೋಲು ಬಾರಿಸಿ, ಕೊರಿಯಾಗೆ ನಡುಕ ಹುಟ್ಟಿಸಿದರೂ, ದ್ವಿತೀಯಾರ್ಧದಲ್ಲಿ ತಿರುಗಿಬಿದ್ದ ಕೊರಿಯಾ ಸಮಬಲ ಕಾಯ್ದುಕೊಂಡಿತು. ಆದರೆ, ಕೊನೆಯ ನಗೆ ಉರುಗ್ವೆ ಪಾಲಾಗಿತ್ತು.

ದ್ವಿತೀಯಾರ್ಧದಲ್ಲಿ ಕೊರಿಯಾ ತೋರಿದ ಆಕ್ರಮಣಕಾರಿ ಮನೋಭಾವವನ್ನು ಪಂದ್ಯದ ಆರಂಭದಿಂದಲೇ ತೋರಿದ್ದರೆ, ಫಲಿತಾಂಶ ಖಂಡಿತಾ ಏರುಪೇರಾಗುವ ಸಾಧ್ಯತೆಯಿತ್ತು. ಸುರಿವ ಮಳೆಯಲ್ಲಿ ಉರುಗ್ವೆಗಿಂತ ಕೊರಿಯಾ ಸಹಜವಾಗಿ ಆಡಿತು. ಆಡುವ ಆದರೆ, ಉರುಗ್ವೆ ಅರ್ಹ ಜಯ ಸಂಪಾದಿಸಿತು ಎಂದರೆ ತಪ್ಪಾಗಲಾರದು.

ದಕ್ಷಿಣ ಅಮೆರಿಕ ದೇಶಗಳ ವಿರುದ್ಧ ಕೊರಿಯಾದ ಸೋಲಿನ ಅಭಿಯಾನ ಮುಂದುವರೆದರೂ, ಪಂದ್ಯದ ಮುನ್ನೋಟದ ಲೇಖನದಂತೆ ಹೇಳಿದಂತೆ ರಕ್ಷಣಾ ಪಡೆಯ ವೈಫಲ್ಯ, ಸುರಿವ ಮಳೆಯಲ್ಲಿ ಫುಟ್ಬಾಲ್ ಅನ್ನು ಭದ್ರವಾಗಿ ಹಿಡಿದುಕೊಳ್ಳಲು ಗೋಲಿಗಳು ಕಷ್ಟಪಡಬೇಕಾಯಿತು. ಕೊರಿಯಾ ಸಿಕ್ಕ ಅವಕಾಶಗಳನ್ನು ಗೋಲಾಗಿಸುವಲ್ಲಿ ಯಶ ಕಾಣಲಿಲ್ಲ. ಉರುಗ್ವೆ ಆಕ್ರಮಣ ಎದುರಿಸಲು ಉತ್ತಮವಾದ ಗೇಮ್ ಪ್ಲಾನ್ ಅಗತ್ಯವಿತ್ತು. ಎನಿವೇ, ಕೊರಿಯಾ ಉತ್ತಮ ಪ್ರದರ್ಶನದೊಂದಿಗೆ ಹಿಂತಿರುಗಲಿದೆ.

ಸೂಪರ್ ಸೊರೆಜ್ ಷೋ: ಡಿಯಾಗೋ ಫೋರ್ಲಾನ್ ಹಾಗೂ ಸೊರೆಜ್ ಜುಗಲ್ ಬಂದಿ ಯಾವುದೇ ತಂಡದ ರಕ್ಷಣಾ ಪಡೆಯನ್ನು ಛಿದ್ರಗೊಳಿಸುವ ಸಾಮರ್ಥ್ಯ ಹೊಂದಿದ್ದು, ತಂಡವನ್ನು ಉಪಾಂತ್ಯಕ್ಕೆ ತಲುಪಿಸಿದರೆ ಅಚ್ಚರಿಯೇನಿಲ್ಲ. ಎರಡು ಬಾರಿ ಗೋಲು ಬಾರಿಸಿದ ಸೊರೆಜ್ , ಆರಂಭದ 8 ನಿಮಿಷದಲ್ಲಿ ಎಡಬದಿಯಿಂದ ಪೊರ್ಲಾನ್ ನೀಡಿದ ಅದ್ಭುತ ಪಾಸ್ ಅನ್ನು ಗೋಲಾಗಿಸಿದಾಗ ಗೋಲ್ ಕೀಪರ್ ಮೂಕ ಪ್ರೇಕ್ಷಕನಾಗಿ ನೋಡುತ್ತಾ ನಿಲ್ಲಬೇಕಾಯಿತು.

ವಿಡಿಯೋಗಳು :
ವಿಶ್ವಕಪ್ ಆಶಯ ಗೀತೆ || ಗಾಯಕಿ ಶಕೀರಾ ಗೀತೆ || ಎಕಾನ್ ಹಾಡಿದ ಆಫ್ರಿಕಾ ಗೀತೆ ||

ದ್ವಿತೀಯಾರ್ಧದಲ್ಲಿ 68 ನೇ ನಿಮಿಷದಲ್ಲಿ ಫ್ರೀಕಿಕ್ ಮೂಲಕ ಬಂದ ಬಾಲ್ ಅನ್ನು ಲೀ ಚುಂಗ್ ಯಂಗ್ ಹೆಡ್ ಮಾಡುವ ಮೂಲಕ ಈ ವಿಶ್ವಕಪ್ ನಲ್ಲಿ ಉರುಗ್ವೆ ವಿರುದ್ಧ ಮೊದಲ ಗೋಲು ಹೊಡೆದ ಕೀರ್ತಿ ಪಡೆದಿದ್ದಲ್ಲದೆ, ಕೊರಿಯಾಗೆ ಗೆಲುವಿನ ಆಸೆ ಹುಟ್ಟಿಸಿದರು.

ಆದರೆ, ಸೊರೆಜ್ ಮತ್ತೊಮ್ಮೆ ಆಕ್ರಮಣ ಆಟ ಮುಂದುವರೆಸಿ, 80 ನೇ ನಿಮಿಷದಲ್ಲಿ ಗೋಲು ಹೊಡೆದು ಕೊರಿಯಾದ ವಿಶ್ವಕಪ್ ಅಭಿಯಾನ ಮುಕ್ತಾಯಕ್ಕೆ ನಾಂದಿ ಹಾಡಿದರು. ಪಂದ್ಯದ ನಂತರ ಸುರಿವ ಮಳೆಯಲಿ ಅಳುತ್ತಿದ್ದ ಕೊರಿಯನ್ನರಿಗೆ ಅಭಿಮಾನಿಗಳ ಭಾರಿ ಕರತಾಡನ ಸಿಕ್ಕಿದ್ದಂತೂ ಸುಳ್ಳಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X