• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಳೆ ಹುಲಿ ಉರುಗ್ವೆಗೆ ಕೊರಿಯಾ ಸವಾಲ್

By Mahesh
|
ಪೋರ್ಟ್ ಎಲಿಜಬೆತ್ , ಜೂ. 26 : ಫೀಫಾ ವಿಶ್ವಕಪ್ 2010ನಲ್ಲಿ ಲೀಗ್ ಪಂದ್ಯ ಮುಗಿದು, ನಾಕೌಟ್ ಹಂತ ಆರಂಭವಾಗಲಿದ್ದು, ರೋಚಕ ಹಣಾಹಣಿಗೆ ಮೈದಾನಗಳು ಸಜ್ಜಾಗಿವೆ. ಎ ಗುಂಪಿನ ಅಗ್ರಸ್ಥಾನ ಪಡೆದ ಹಳೆ ಹುಲಿ ಉರುಗ್ವೆ, ಏಷ್ಯನ್ ಟೈಗರ್ಸ್ ದಕ್ಷಿಣ ಕೊರಿಯಾವನ್ನು ಇಂದು ಪೋರ್ಟ್ ಎಲಿಜಬೆತ್ ನಲ್ಲಿ ಎದುರಿಸಲಿದೆ. ಭಾರತೀಯ ಕಾಲಮಾನ ಪ್ರಕಾರ ಸಂಜೆ 7.30ಕ್ಕೆ ಇಎಸ್ ಪಿಎನ್/ಸ್ಟಾರ್ ಸ್ಫೋರ್ಟ್ಸ್ ನಲ್ಲಿ ಪಂದ್ಯ ಪ್ರಸಾರವಾಗಲಿದೆ.

16ರ ಹಂತಕ್ಕೆ ಬಂದ ಬಗೆ: ಲೀಗ್ ಹಂತದಲ್ಲಿ ಉರುಗ್ವೆ 3 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ, ಮೆಕ್ಸಿಕೋವನ್ನು ಮಣಿಸಿ, ಫ್ರಾನ್ಸ್ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದು, ಉತ್ತಮ ಲಯದಲ್ಲಿದೆ. ಕೊರಿಯಾ ತಂಡ ಗ್ರೀಸ್ ವಿರುದ್ಧ ಗೆದ್ದು, ನೈಜಿರಿಯಾ ವಿರುದ್ಧ ಡ್ರಾ ಸಾಧಿಸಿಕೊಂಡು, ಅರ್ಜೆಂಟಿನಾ ವಿರುದ್ಧ ಹೀನಾಯ ಸೋಲು ಅನುಭವಿಸಿತ್ತು.

1930 ಮತ್ತು 1950ರಲ್ಲಿ ಚಾಂಪಿಯನ್ ಆಗಿದ್ದ ಉರುಗ್ವೆ 1990ರ ಬಳಿಕ ಇದೇ ಮೊದಲ ಬಾರಿಗೆ ದ್ವಿತೀಯ ಸುತ್ತು ಪ್ರವೇಶ ಮಾಡಿದೆ. 2002ರ ವಿಶ್ವಕಪ್ ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ದಕ್ಷಿಣ ಕೊರಿಯಾ ಉತ್ತಮ ಹೋರಾಟ ನೀಡುವುದಂತೂ ಖಂಡಿತ.

ಬಲಾಬಲ: ಉರುಗ್ವೆ ಸಹಜವಾಗಿ ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿದ್ದು, ಲೀಗ್ ಹಂತದಲ್ಲಿ ಎದುರಾಳಿಗೆ ಗೋಲು ಹೊಡೆಯುವ ಅವಕಾಶವನ್ನು ನೀಡಿಲ್ಲ. ದಕ್ಷಿಣ ಕೊರಿಯಾ ಉತ್ತಮ ಮುಂಪಡೆ ಆಟಗಾರರನ್ನು ಹೊಂದಿದ್ದರೂ, ರಕ್ಷಣೆಯ ವಿಷಯದಲ್ಲಿ ಸ್ವಲ್ಪ ದುರ್ಬಲ. ಉರುಗ್ವೆ ಹಾಗೂ ಕೊರಿಯಾ ಎಂದಿನಂತೆ ಆಕ್ರಮಣಿಕಾರಿ ಆಟಕ್ಕೆ ಮುಂದಾಗುವ ಸಾಧ್ಯತೆಯಿದ್ದು, ಏಷ್ಯನ್ ಟೈಗರ್ಸ್ ರಕ್ಷಣಾ ಪಡೆಯನ್ನು ಉತ್ತಮ ಪಡಿಸದಿದ್ದರೆ, ಸೋಲು ಕಟ್ಟಿಟ್ಟ ಬುತ್ತಿ.

ಪ್ರಮುಖ ಆಟಗಾರರು : ಉರುಗ್ವೆಯ ಡಿಯಾಗೋ ಫೋರ್ಲಾನ್ ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಕೊರಿಯಾವನ್ನು ಕಾಡುವುದು ಗ್ಯಾರಂಟಿ. ಫೋರ್ಲಾನ್ ಗೆ ಸೋರೆಜ್ ಬೆಂಬಲವಿದೆ. ಪಾರ್ಕ್ ಜಿ ಸುಂಗ್ ಆಟದ ಮೇಲೆ ಕೊರಿಯಾ ಅವಲಂಬಿತವಾಗಿದ್ದು, ಮಿಡ್ ಫೀಲ್ಡರ್ ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಚು ಯಂಗ್ ಸೇರಿದಂತೆ ಮುಂಪಡೆ ಆಟಗಾರರು ಇನ್ನಷ್ಟು ನಿಖರವಾದ ಆಟ ಆಡುವ ಅಗತ್ಯವಿದೆ.

ಗೆಲ್ಲುವ ತಂಡ: ಉರುಗ್ವೆ ಗೆಲ್ಲುವ ನೆಚ್ಚಿನ ತಂಡವಾದರೂ, ಕೊರಿಯಾವನ್ನು ಕಡೆಗಣಿಸುವಂತಿಲ್ಲ. ಉರುಗ್ವೆಯ ಮುಂಪಡೆ ಆಟಗಾರರನ್ನು ಕಟ್ಟಿಹಾಕಿದರೆ ಕೊರಿಯಾ ಅರ್ಧ ಪಂದ್ಯವನ್ನು ಗೆದ್ದಂತೆ. ಬೆಟ್ಟಿಂಗ್ ಬಾಸ್ ಗಳ ಊಹೆಯಂತೆ ಉರುಗ್ವೆ 2-0 ಅಂತರದಲ್ಲಿ ಗೆಲ್ಲುವ ಸಾಧ್ಯತೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more