ಹಳೆ ಹುಲಿ ಉರುಗ್ವೆ ಬಗ್ಗೆ ಎಚ್ಚರವಿರಲಿ!

ರುಸ್ಟೆನ್‌ಬರ್ಗ್, ಜೂ.23 : ಫ್ರಾನ್ಸ್ ತಂಡದ ಹೀನಾಯ ನಿರ್ಗಮನ ಒಂದು ಕಡೆಯಲ್ಲಿ ಆಗುತ್ತಿದ್ದಂತೆ ಎ ಗುಂಪಿನಲ್ಲಿ ಉರುಗ್ವೆ ಮತ್ತು ಮೆಕ್ಸಿಕೋ ತಂಡಗಳು ಅಂತಿಮ16ರ ಸುತ್ತಿಗೆ ಪ್ರವೇಶ ಪಡೆದಿವೆ.

ಮಂಗಳವಾರ ನಡೆದ ಪ್ರಬಲ ಕಾದಾಟದಲ್ಲಿ ಉರುಗ್ವೆ ಮೆಕ್ಸಿಕೋ ವಿರುದ್ಧ1-0 ಅಂತರದಿಂದ ಗೆಲುವು ದಾಖಲಿಸಿತು. 43ನೇ ನಿಮಿಷದಲ್ಲಿ ಉರುಗ್ವೆಯ ಸ್ಟ್ರೈಕರ್ ಲೂಯಿಸ್ ಸುವಾರೆಜ್ ಸಿಡಿಸಿದ ಏಕೈಕ ಗೋಲಿನಿಂದ ಉರುಗ್ವೆ ಜಯ ಸಾಧಿಸಿತು.

ಈ ಜಯದಿಂದಾಗಿ ಎ ಗುಂಪಿನಲ್ಲಿ ಉರುಗ್ವೆ ಅಗ್ರಸ್ಥಾನದೊಂದಿಗೆ ಮುಂದಿನ ಹಂತಕ್ಕೇರಿದರೆ, ಮೆಕ್ಸಿಕೋ ಗೋಲು ಗಳಿಕೆಯ ಆಧಾರದಲ್ಲಿ ದಕ್ಷಿಣ ಆಫ್ರಿಕಾವನ್ನು ಹೊರಗಟ್ಟಿ ದ್ವಿತೀಯ ಸ್ಥಾನಿಯಾಗಿ ದ್ವಿತೀಯ ಸುತ್ತು ಪ್ರವೇಶ ಮಾಡಿತು. 1970 ಹಾಗೂ 1986 ರ ವಿಶ್ವಕಪ್ ಗಳಲ್ಲಿ ಕ್ವಾಟರ್ ಫೈನಲ್ ಹಂತ ಮುಟ್ಟಿದ್ದೇ ಮೆಕ್ಸಿಕೋ ತಂಡದ ಈವರೆಗಿನ ಸಾಧನೆ ಎನಿಸಿದೆ.

16ರ ಸುತ್ತಿನ ಮೊದಲ ಪಂದ್ಯ:ಜೂ.26ರಂದು ಪೋರ್ಟ್ ಎಲಿಜಬೆತ್ ನ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿರುವ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ. ಭಾರತೀಯ ಕಾಲಮಾನ ಪ್ರಕಾರ 7.30 ಕ್ಕೆ ಪಂದ್ಯ ಆರಂಭವಾಗಲಿದೆ.

1930 ಮತ್ತು 1950 ರಲ್ಲಿ ಚಾಂಪಿಯನ್ ಆಗಿದ್ದ ಉರುಗ್ವೆ 1990 ರ ಬಳಿಕ ಇದೇ ಮೊದಲ ಬಾರಿಗೆ ದ್ವಿತೀಯ ಸುತ್ತು ಪ್ರವೇಶ ಮಾಡಿದೆ. 2002ರ ವಿಶ್ವಕಪ್ ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ದಕ್ಷಿಣ ಕೊರಿಯಾ ಉತ್ತಮ ಹೋರಾಟ ನೀಡುವುದಂತೂ ಖಂಡಿತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+