ಎಂಟು ತಿಂಗಳ ಕಾಲ ಶಿಕ್ಷಕಿ ಮೇಲೆ ಅತ್ಯಾಚಾರ

Teacher gang raped for 8 months, attempts suicide
ಅಹ್ಮದಾಬಾದ್, ಜೂ. 22 : ಎಂಟು ತಿಂಗಳು ಸತತವಾಗಿ ಸಹೋದ್ಯೋಗಿ ಮತ್ತವನ ಸ್ನೇಹಿತರಿಂದ ಅತ್ಯಾಚಾರಕ್ಕೆ ಈಡಾಗಿದ್ದ ಶಿಕ್ಷಕಿಯೋರ್ವಳು ಮನನೊಂದು ಆತ್ಮಹತ್ಯೆಗೆ ಯತ್ನಿಸಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿದ್ದಾಳೆ.

ಪಿಟಿಸಿ ಕಾಲೇಜಿನಲ್ಲಿ ಕೆಲಸಕ್ಕಿದ್ದ ಮಹಿಳೆ ಆತ್ಮಹತ್ಯೆಗೆ ಮುಂಚೆ ಬರೆದಿರುವ ಪತ್ರದಲ್ಲಿ ಸಹೋದ್ಯೋಗಿ ಮತ್ತವನ ಸ್ನೇಹಿತರು ಅತ್ಯಾಚಾರವೆಸಗಿ ಬೆತ್ತಲೆ ಚಿತ್ರಗಳನ್ನು ತೆಗೆದಿದ್ದಾರೆ ಮತ್ತು ಬ್ಲಾಕ್ ಮೇಲ್ ಮಾಡಲು ಯತ್ನಿಸುತ್ತಿದ್ದರು ಎಂದು ಹೇಳಿದ್ದಾಳೆ.

ನೆರೆಮನೆಯ ಪ್ರಾಥಮಿಕ ಶಾಲಾ ಶಿಕ್ಷಕ ಮುಖೇಶ್ ಪಟೇಲ್ ಎಂಬಾತನ ಸಹಾಯದಿಂದ ಕಾಲೇಜು ಕೆಲಸವನ್ನು ಆಕೆ ಗಿಟ್ಟಿಸಿದ್ದಳು. ಸಹಾಯ ಮಾಡಿದ್ದಕ್ಕೆ ಪ್ರತಿಯಾಗಿ ಆತ ಆಕೆಯನ್ನು ಬಳಸಿಕೊಳ್ಳಲು ಪ್ರಾರಂಭಿಸಿದ್ದಾನೆ. ಅಷ್ಟೇ ಅಲ್ಲದೆ ತನ್ನ ಮೂವರು ಸ್ನೇಹಿತರನ್ನು ಹೀನಾಯ ಕೃತ್ಯಕ್ಕೆ ಸಾಥಿಯಾಗಲು ಆಹ್ವಾನಿಸಿದ್ದಾನೆ.

ಅವರು ಕೂಡ ಶಿಕ್ಷಕಿಯನ್ನು ಬಲಾತ್ಕಾರ ಮಾಡಿದ್ದು, ಅವರನ್ನು ಕೇತನ್ ಮತ್ತು ದಿನೇಶ್ ಎಂದು ಗುರುತಿಸಲಾಗಿದೆ. ಓರ್ವನನ್ನು ಮಾತ್ರ ಬಂಧಿಸಲಾಗಿದ್ದು ಉಳಿದವರ ಬೇಟೆಗೆ ಪೊಲೀಸರು ಬಲೆ ಬೀಸಿದ್ದಾರೆ.

ರೇಪ್-ಆಕ್ಸ್ ಕಾಂಡೋಮ್ : ಮಹಿಳೆಯರಿಗೆ ವರದಾನ, ಅತ್ಯಾಚಾರಿಗೆ ಶಾಪ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+