ಕೊಪ್ಪಳ ಕೋಕಾ ಕೋಲಾದ 30 ಕಾರ್ಮಿಕರು ಅಸ್ವಸ್ಥ

ಸುಮಾರು 30 ಕ್ಕೂ ಅಧಿಕ ಕಾರ್ಮಿಕರು ಇಂದು ಬೆಳಗ್ಗೆ ಕಾರ್ಖಾನೆಯ ಉಪಹಾರ ಕೇಂದ್ರದಲ್ಲಿ ಚಪಾತಿ ಹಾಗೂ ಅನ್ನ, ಸಾಂಬಾರು ಸೇವಿಸಿದ ನಂತರ ಆರೋಗ್ಯ ಸ್ಥಿತಿಯಲ್ಲಿ ಏರುಪೇರು ಉಂಟಾಗಿದೆ. ಕ್ಯಾಂಟೀನ್ ನಲ್ಲಿ ಸೇವಿಸಿದ ಆಹಾರ ವಿಷವಾಗಿ ಪರಿಣಮಿಸಿ ನಂತರ ಕಾರ್ಮಿಕರು ಹೊಟ್ಟೆನೋವು, ವಾಂತಿ, ತಲೆಸುತ್ತು ಮುಂತಾದ ತೊಂದರೆ ಅನುಭವಿಸತೊಡಗಿದ್ದಾರೆ.
ಆಡಳಿತ ಮಂಡಳಿ ನಿರ್ಲಕ್ಷ್ಯ: ಕಂಪೆನಿ ಕ್ಯಾಂಟೀನ್ ನಲ್ಲಿ ಕಳಪೆ ಆಹಾರ ಸಾಮಾಗ್ರಿ ಬಳಸಿ ಉಪಹಾರ ತಯಾರಿಸುತ್ತಿರುವ ಬಗ್ಗೆ ಕಾರ್ಮಿಕರು ಅನೇಕ ಬಾರಿ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಆದರೆ, ಕ್ಯಾಂಟೀನ್ ಆಹಾರದ ಗುಣಮಟ್ಟ ಸುಧಾರಣೆ ಬಗ್ಗೆ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರುತ್ತಿದೆ.
ಕೊನೆಗೆ ಇಂದು ಕಾರ್ಮಿಕರು ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿದ ಎಷ್ಟೋ ಹೊತ್ತಿನ ಮೇಲೆ ಬಂದು ವಿಚಾರಿಸಿ, ಚಿಕಿತ್ಸೆ ವೆಚ್ಚ ಭರಿಸುವ ಮಾತುಗಳನ್ನಾಡುತ್ತಿದ್ದಾರೆ. ಕಾರ್ಮಿಕರ ಜೀವ ಬೆಲೆ ಇಲ್ಲದ್ದಂತಾಗಿದೆ ಎಂದು ಕಾರ್ಮಿಕ ಮುಖಂಡರು ಗುಡುಗಿದ್ದಾರೆ.











Click it and Unblock the Notifications