ವೈಚಿತ್ರ್ಯ: ನಾಯಿ ಹಾಲು ಕುಡಿವ ಎಮ್ಮೆಕರು

ನಾಯಿ ಮರಿಗಳಿಗೆ ಮಾತ್ರ ಸೀಮಿತವಾಗಿದ್ದ ನಾಯಿ ಹಾಲು, ಸವಣೂರ ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಒಂದು ಎಮ್ಮೆ ಕರುವಿಗೆ ಮಾತ್ರ ಅಮೃತ ಸಮಾನವಾಗಿ ಪರಿಣಮಿಸಿದೆ. ತೆಗ್ಗಿಹಳ್ಳಿ ಗ್ರಾಮದ ರಾಜೇಸಾಬ ಖತಾಲಸಾಬ ಬಣಗಾರ ಅವರ ಮನೆಯಲ್ಲಿ ಕಳೆದ ಒಂದು ವರ್ಷದಿಂದ ಈ ವಿಚಿತ್ರ ವಿದ್ಯಮಾನ ಪ್ರತಿನಿತ್ಯ ಜರುಗುತ್ತಿದೆ.
ದಿನಕ್ಕೆ ಒಂದು ಬಾರಿಯಂತೆ ಮನೆಯಲ್ಲಿನ ಒಂದು ಎಮ್ಮೆ ಕರುವಿಗೆ ತನ್ನ ಹಾಲನ್ನು ಧಾರೆ ಎರೆಯುತ್ತಿರುವ ನಾಯಿ ಪುಣ್ಯಕೋಟಿಯ ಸ್ವರೂಪ ಪಡೆದುಕೊಂಡಿದೆ. ಇನ್ನೊಂದೆಡೆ ತಾಯಿ ಎಮ್ಮೆಯೊಂದಿಗೆ ನಾಯಿಯ ಹಾಲನ್ನೂ ಮೈಗೂಡಿಸಿಕೊಳ್ಳುತ್ತಿದ್ದೆ.
ಎಮ್ಮೆ ಮರಿಗೆ ಯಾವ ಹಾಲಿನ ಗುಣ ಬರುವುದೋ ಕಾಯ್ದುನೋಡಬೇಕಾಗಿದೆ. ಕಲಿಯುಗದ ಕಾಮಧೇನು ಆಗುತ್ತಿರುವ ಎಮ್ಮೆಗಳಿಗೂ ಹಾಲಿನ ಬರ ಬಂದಿದೆಯೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.












Click it and Unblock the Notifications