ಬ್ಯಾಡ್ಮಿಂಟನ್: ಸಿಂಗಾಪುರದಲ್ಲಿ ಸೈನಾ ಶೈನಿಂಗ್
ಸಿಂಗಾಪುರ,
ಜೂ.20: ಇಲ್ಲಿ ನಡೆಯುತ್ತಿರುವ ಸಿಂಗಾಪುರ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ನಲ್ಲಿ ಚೈನೀಸ್ ತೈಪೆಯ ಸ್ಪರ್ಧಿಯನ್ನು ಮಣಿಸಿದ ಭಾರತದ ಹೆಮ್ಮೆಯ ಆಟಗಾರ್ತಿ ಸೈನಾ ನೆಹ್ವಾಲ್ ಸಾಧನೆ ಮೆರೆದಿದ್ದಾರೆ. id="toptextpromo">ವಿಶ್ವ
ನಂ.5 ಆಟಗಾರ್ತಿ ಸೈನಾ ನೆಹ್ವಾಲ್ ಇಂದು ನಡೆದ ಫೈನಲ್ ನಲ್ಲಿ ಚೈನೀಸ್ ತೈಪೆಯ ತ್ಸೂ ಯಿಂಗ್ ತಾಯಿ ಅವರನ್ನು ಕೇವಲ 33 ನಿಮಿಷಗಳಲ್ಲಿ 21-18, 21-15ರ ನೇರ ಸೆಟ್ ಗಳ ಅಂತರದಲ್ಲಿ ಮಣಿಸಿ ಪ್ರಶಸ್ತಿಯನ್ನು ಗಳಿಸಿದರು. id='are-slot-1' class='oiad oi-axt oiadv'> id='top-searched-articles'>ಶನಿವಾರ
ನಡೆದ ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಲ್ಯಾನ್ ಲೂ ವಿರುದ್ಧ 8-21, 21-17, 21-8ಸೆಟ್‌ಗಳ ಅಂತರದಲ್ಲಿ ಸೈನಾ ಜಯಗಳಿಸಿದ್ದರು. ಕಳೆದ ವರ್ಷ ಇಂಡೋನೆಷನ್ ಓಪನ್ ಸೂಪರ್ ಸೀರಿಸ್ ಪ್ರಶಸ್ತಿ ಗೆದ್ದಿದ್ದ ನಲ್ಲಿದ್ದ ಸೈನಾ ಸಿಂಗಪುರ ಓಪನ್ ಗೆಲ್ಲುವ ಮೂಲಕ ಎರಡನೇ ಸೂಪರ್ ಸೀರಿಸ್ ಪ್ರಶಸ್ತಿ ಗಳಿಸಿದ ಸಾಧನೆ ಮೆರೆದಿದ್ದಾರೆ.











Click it and Unblock the Notifications