ಹಾಲಪ್ಪ ಪ್ರಕರಣ; ದೂರವಾಣಿ ದಾಖಲೆ ಸಲ್ಲಿಸಿದ ಸಿಐಡಿ

ತಮ್ಮ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು. ದೂರಿನಲ್ಲಿನ ವಿವರಗಳು ಅಸಂಗತವಾಗಿವೆ ಎಂದು ಹಾಲಪ್ಪ ಹೇಳಿದ್ದರು. ಇದೀಗ ಸಿಐಡಿ ಪೊಲೀಸರು ದೂರವಾಣಿ ಸಂಭಾಷಣೆಗಳನ್ನು ಹೈಕೋರ್ಟ್ ಗೆ ಸಲ್ಲಿಸಿದ್ದಾರೆ. ಅತ್ಯಾಚಾರಕ್ಕೊಳಗಾದ ಮಹಿಳೆಯ ಗಂಡ ಶಿವಮೊಗ್ಗದ ಲಾಡ್ಜ್ ನಲ್ಲಿದ್ದ ವ್ಯಕ್ತಿಗೆ ಮಾಡಿದ ದೂರವಾಣಿ ವಿವರಗಳವು ಎನ್ನಲಾಗಿದೆ.
ವಿಡಿಯೋ ಪ್ರಕಾರ ಅತ್ಯಾಚಾರ ನಡೆದಿರುವುದು ರಾತ್ರಿ 10.30ರ ಸಮಯದಲ್ಲಿ. ಆದರೆ ದೂರಿನಲ್ಲಿ ಮುಂಜಾನೆ 3.30 ಎಂದು ದಾಖಲಿಸಲಾಗಿದೆ. ಮುಖ್ಯನ್ಯಾಯಮೂರ್ತಿಗಳಾದ ಸುಭಾಷ್ ಬಿ ಅಡಿ ಅವರು ಪ್ರಕರಣದ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ್ದಾರೆ.
ಅತ್ಯಾಚಾರ ಪ್ರಕರಣ ಬಯಲಾದ ಬಳಿಕ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಾಲಪ್ಪನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದರು. ಶಿವಮೊಗ್ಗ ನ್ಯಾಯಾಲಯದಲ್ಲಿ ಹಾಲಪ್ಪ ಜಾಮೀನು ಅರ್ಜಿ ವಜಾಗೊಂಡ ಮೇಲೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ತಮ್ಮ ವಿರುದ್ಧ ಅತ್ಯಾಚಾರ ಆರೋಪವನ್ನು ಹಾಲಪ್ಪ ಅಲ್ಲಗಳೆದಿದ್ದರು.












Click it and Unblock the Notifications