ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಕರ್ ಪಂದ್ಯ ನೋಡಿದರೆ ಸಾವು ಖಚಿತ

By Mahesh
|
Google Oneindia Kannada News

ಫೀಫಾ ಫುಟ್ಬಾಲ್ ವಿಶ್ವಕಪ್ ಎಲ್ಲರ ಕಣ್ಮನ ಸೆಳೆಯುವ ಹಬ್ಬವಾಗಿದೆ. ಎಲ್ಲರೂ ಪಂದ್ಯವೀಕ್ಷಿಸಲು ಸಮಯ ಹೊಂದಿಸಿಕೊಂಡು ಟಿವಿ ಪರದೆ ವೀಕ್ಷಿಸಿ ಆನಂದಿಸುತ್ತಿದ್ದಾರೆ. ಆದರೆ, ಸೊಮಾಲಿಯಾದಲ್ಲಿ ಮಾತ್ರ ವಿಶ್ವಕಪ್ ಪಂದ್ಯಗಳನ್ನು ನೋಡುವುದೆಂದರೆ ಪ್ರಾಣವನ್ನು ಪಣಕ್ಕಿಟ್ಟಂತೆ.

ಒಂದು ಕಣ್ಣು ಟಿವಿ ಮೇಲೆ ಮತ್ತೊಂದು ಬಾಗಿಲ ಮೇಲೆ ನೆಟ್ಟು ಜೀವಭಯದಿಂದ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದೇವೆ ಎನ್ನುತ್ತಾರೆ ಸಾಕರ್ ಅಭಿಮಾನಿಯೊಬ್ಬರು. ಯಾವ ಕ್ಷಣದಲ್ಲಿ ಉಗ್ರರು ದಾಳಿ ನಡೆಸುತ್ತಾರೋ ಎಂಬ ಭೀತಿಯಲ್ಲೇ ಫುಟ್ಬಾಲ್ ಹಬ್ಬ ಆಚರಿಸುತ್ತಿದ್ದಾರೆ. ಒಂದು ಕಡೆ ಕಡಲ್ಗಳ್ಳರು, ಇನ್ನೊಂದು ಕಡೆ ಮೂಲಭೂತವಾದಿಗಳು ಇವರ ಮಧ್ಯೆ ಸಿಕ್ಕಿ ಜನ ಸಾಮಾನ್ಯರು ತತ್ತರಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಉಗ್ರರು, ಮೂಲಭೂತವಾದಿಗಳ ಕೈಲಿ ದೇಶದ ಚುಕ್ಕಾಣಿ ಇರುವುದರಿಂದ ಟಿವಿ ನೋಡಿದರೆ ಸಾರ್ವಜನಿಕವಾಗಿ ಜೀವಹರಣವಾಗುವುದ್ದಂತೂ ಖಂಡಿತ. ಪರಿಸ್ಥಿತಿ ಹೀಗಿದ್ದರೂ ಸೊಮಾಲಿಗಳು ಕದ್ದು ಮುಚ್ಚಿ ಟಿವಿ ವೀಕ್ಷಿಸುತ್ತಿದ್ದಾರೆ.

ಇದುವರೆವಿಗೂ ಸುಮಾರು 30 ಅಧಿಕ ಜನರನ್ನು ಬಂಧಿಸಿದ್ದರಲ್ಲದೆ ಇಬ್ಬರನ್ನು ಹತ್ಯೆಗೈದಿದ್ದಾರೆ. ಬಂಧಿತ ಮೂವತ್ತು ಜನರ ಸ್ಥಿತಿಯ ಬಗ್ಗೆ ಯಾವುದೇ ಸುದ್ದಿಯಿಲ್ಲ. ಬಂಧಿತರನ್ನು ನೋಡಲು ಅವರ ಕುಟುಂಬದವರಿಗೆ ಈವರೆಗೂ ಬಿಟ್ಟಿಲ್ಲ.

ನಿಷೇಧಕ್ಕೆ ಇಸ್ಲಾಂ ಸಮರ್ಥನೆ: ಫುಟ್ಬಾಲ್ ಆಟ ಹುಟ್ಟಿದ್ದು, ಕ್ರೈಸ್ತರ ಸಂಸ್ಕೃತಿ ಹೊಂದಿರುವ ದೇಶದಿಂದ, ಇಸ್ಲಾಂ ಆಡಳಿತ ಫೀಫಾ ವಿಶ್ವಕಪ್ ನೋಡಲು ಅವಕಾಶ ನೀಡುವುದಿಲ್ಲ ಎಂದು ಇಸ್ಲಾಂ ಸಂಘಟನೆ ಮುಖಂಡ ಶೇಕ್ ಅಬು ಯಹ್ಯಾ ಇರಾಕಿ ಹೇಳಿತ್ತಾರೆ.

'ಹಿಜ್ಬುಲ್ ಇಸ್ಲಾಂ' ಅಹಗೂ 'ಅಲ್ ಷಬಾದ್' ಹೆಸರಿನ ಇಸ್ಲಾಂ ಸಂಘಟನೆಗಳು ಷರಿಯಾರ್ ಕಾನೂನು ಅಳವಡಿಸುತ್ತಿದೆ. ನಿಯಮಗಳನ್ನು ಮೀರಿದರೆ ಉಗ್ರ ಶಿಕ್ಷೆ ನೀಡುತ್ತದೆ. ಸಾಕರ್ ಆಟ' ಸೈತಾನನ ಕೃತ್ಯ' ಎಂದು ಇಸ್ಲಾಂ ಸಂಘಟಕರು ನಂಬಿದ್ದಾರೆ. 2006 ವಿಶ್ವಕಪ್ ಪಂದ್ಯಾವಳಿ ಸಮಯದಲ್ಲಿ ಟಿವಿ ವೀಕ್ಷಣೆಗೆ ಹೇರಿದ್ದ ನಿಷೇಧ ಇನ್ನೂ ಜಾರಿಯಲ್ಲಿದೆ.

ಇಥಿಯೋಪಿಯಾದ ಸೈನಿಕರು ಇಸ್ಲಾಂ ಬಂಡುಕೋರರನ್ನು 2007 ರಲ್ಲೇ ದೇಶದಿಂದ ಹೊರಗಟ್ಟಿದ್ದರು. ಆದರೆ, ನಂತರ ತನ್ನ ಪ್ರಾಬಲ್ಯ ಹಿಗ್ಗಿಸಿಕೊಂಡ ಇಸ್ಲಾಂ ಸಂಘಟನೆಗಳು ಮೂಲಭೂತವಾದವನ್ನು ಎಲ್ಲೆಡೆ ಪಸರಿಸಲು ಅಣಿಯಾಗಿವೆ. ಉಗ್ರರ ದಾಳಿಗೆ ಸಿಕ್ಕಿ ಅಮಾಯಕ ಸಾವಿರಾರು ಜನ ಸೊಮಾಲಿಗಳು ಸಾವನ್ನಪ್ಪುತ್ತಿದ್ದಾರೆ.

English summary
Somalia's militant groups, who control much of the country, have warned that citizens will be publicly flogged or worse if they are caught secretly watching fifa world cup 2010 games.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X