ಬಡಮಕ್ಕಳಿಗೆ ಅಂತಾರಾಷ್ಟ್ರೀಯ ದರ್ಜೆಯ ಶಾಲೆ

ಈ ಶಾಲೆ ಇದೇ ಶುಕ್ರವಾರ ಜೂನ್ 18ರಂದು ಬಡಮಕ್ಕಳಿಗೆ ದ್ವಾರ ತೆರೆಯಲಿದೆ. ಒಟ್ಟು 300 ಮಕ್ಕಳಿಗೆ ಇಲ್ಲಿ ಶಿಕ್ಷಣ ನೀಡುವ ಅವಕಾಶ ನೀಡಲಾಗಿದ್ದು, ಪ್ರತಿ ಮಗುವಿಗೆ ಲ್ಯಾಪ್ ಟಾಪ್ ನೀಡಲಾಗುತ್ತಿದೆ. ಅಷ್ಟೇ ಅಲ್ಲ, ವೈದ್ಯಕೀಯ ಮತ್ತು ಶೈಕ್ಷಣಿಕ ವಿಮೆ ಕೂಡ ಮಾಡಿಸಲಾಗುತ್ತಿದೆ.
ಶುಲ್ಕ ನೀಡಲಾಗದೆ ಪಾಠ ಕಲಿಯುವ ಅವಕಾಶದಿಂದ ಸಾವಿರಾರು ಮಕ್ಕಳು ವಂಚಿತರಾಗುತ್ತಿದ್ದಾರೆ. ಶಾಲೆ ಸೇರಿಕೊಂಡರೂ ಹೊಟ್ಟೆಪಾಡಿಗಾಗಿ ಶಾಲೆ ತ್ಯಜಿಸುವ ಮಕ್ಕಳಿಗೂ ಕೊರತೆಯಿಲ್ಲ. ಇಂಥ ಸಂದರ್ಭದಲ್ಲಿ ಬಡಮಕ್ಕಳಿಗೆ ಅತ್ಯುತ್ತಮ ಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಇಂಡಸ್ ಇಂಟರ್ನ್ಯಾಶನಲ್ ಸ್ಕೂಲ್ ಶಾಲೆ ಪ್ರಾರಂಭಿಸುತ್ತಿದೆ. ಪಾಠ ಕಲಿಸಲು ಕೆಳ ಮಧ್ಯಮ ವರ್ಗದ ಶಿಕ್ಷಕರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಇಂಡಸ್ ಟ್ರಸ್ಟ್ ನ ಸಿಇಓ ಲೆ.ಜೆ. ಅರ್ಜುನ್ ರೇ ಹೇಳಿದ್ದಾರೆ.
ಈ ಯೋಜನೆಯನ್ನು ರೂಪಿಸಿದ್ದು 9ರಿಂದ 12ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳೇ. ಬಡಮಕ್ಕಳಿಗಾಗಿ ಕಾಟೇಜ್ ರೂಪದಲ್ಲಿ ಕಟ್ಟಲಾಗಿರುವ ಕಟ್ಟಡದ ಡಿಸೈನ್, ಪ್ರಾಯೋಜಕತ್ವ ಎಲ್ಲವನ್ನೂ ನಿಭಾಯಿಸಿದ್ದು ವಿದ್ಯಾರ್ಥಿಗಳು ಎಂಬುದು ಇಲ್ಲಿನ ವಿಶೇಷ.












Click it and Unblock the Notifications