ವಿಶ್ವಬ್ಯಾಂಕಿನಿಂದ ಪಾಕಿಸ್ತಾನಕ್ಕೆ ನೆರವು ವಾಪಾಸ್
ಲಾಹೋರ್,
ಜೂ14:ಪಾಕಿಸ್ತಾನದ ವಿವಿಧ ಕಾಮಗಾರಿಗಳ ಅಭಿವೃದ್ಧಿಗಾಗಿ ಹಣಕಾಸು ನೆರವು ನೀಡಿದ್ದ ವಿಶ್ವಬ್ಯಾಂಕ್, ಹಣ ಒದಗಿಸುವುದನ್ನು ನಿಲ್ಲಿಸಿದೆ. ಸುಮಾರು 750,000 ಮಿಲಿಯನ್ ಡಾಲರ್ ನೆರವಿನ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನಕ್ಕೆ ನಿರಾಶೆಯಾಗಿದೆ. id="toptextpromo">ಪಾಕಿಸ್ತಾನದ
ಖನಿಜ ಸಂಪತ್ತಿನ ಸದ್ಬಳಕೆ ಮಾಡಲು ವಿಶ್ವಬ್ಯಾಂಕ್ ಮೂಲಕ ಜಪಾನ್ ನೆರವು ನೀಡಲು ಮುಂದೆ ಬಂದಿತ್ತು. ಏಪ್ರಿಲ್ 2008ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವಿಶ್ವಬ್ಯಾಂಕ್ ನಿಯೋಗ ಕಾಮಗಾರಿಗಳಿಗೆ ಶೀಘ್ರವೇ ಚಾಲನೆ ನೀಡುವಂತೆ ಸೂಚಿಸಿತ್ತು. ಆದರೆ, ಪಾಕಿಸ್ತಾನ ಆಡಳಿತ ಮಾರ್ಚ್ 2009 ರೊಳಗೆ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿತ್ತು. id='are-slot-1' class='oiad oi-axt oiadv'> id='top-searched-articles'>ಕಾಮಗಾರಿಗಳು
ಪೂರ್ಣಗೊಳ್ಳುವ ದಿನಾಂಕವನ್ನು ದೇ ಪದೇ ಮುಂದೂಡಿದ ಪಾಕಿಸ್ತಾನ, ಉದ್ದೇಶಿತ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಯಾವುದೇ ಕುರುಹು ಕಂಡುಬರದ ಕಾರಣ, ವಿಶ್ವಬ್ಯಾಂಕ್ ಹಣಕಾಸು ನೆರವನ್ನು ಹಿಂಪಡೆದಿದೆ.











Click it and Unblock the Notifications